ಕೋಝಿಕ್ಕೋಡ್: ಇಲ್ಲಿನ ಪ್ರಸಿದ್ಧ ಬೇಬಿ ಮೆಮೋರರಿಯಲ್ ಹಾಸ್ಪಿಟಲ್ ನಲ್ಲಿ ನೂತನವಾಗಿ ರೋಬೋಟಿಕ್ಸ್ ಏಂಡ್ ಲೇಸರ್ ಯುರೋಲಜಿ ಸೆಂಟರ್ ಕಾರ್ಯಾರಂಭಗೊಂಡಿತು. ರೋಬೋಟಿಕ್ಸ್ ಸರ್ಜರಿಯಿಂದ ಹಲವು ಉತ್ತಮ ಪ್ರಯೋಜನಗಳಿವೆಯೆಂದು ಬೇಬಿ ಮೆಮೋರಿಯಲ್ ಹಾಸ್ಪಿಟಲ್ಸ್ ಗ್ರೂಪ್ ಚೇರ್ಮೆನ್ ಡಾ.ಕೆ.ಜಿ. ಅಲೆಕ್ಸಾಂಡರ್ ಹೇಳಿದರು.
ಇದೇ ಸಂದರ್ಭ ಅಡ್ವಾನ್ಸ್ಡ್ ರೋಬೋಟಿಕ್ಸ್ ಏಂಡ್ ಲೇಸರ್ ಯುರೋಲಜಿ ಸೆಂಟರ್ ಅವರು ಉದ್ಘಾಟಿಸಿದರು.
ಬೇಬಿ ಮೆಮೋರಿಯಲ್ ಹಾಸ್ಪಿಟಲ್ ಗ್ರೂಪ್ ಬೆಳವಣಿಗೆಯ ಹಾದಿಯಲ್ಲಿದ್ದು, ರೋಗಿಗಳಿಗೆ ಉತ್ಕೃಷ್ಟವಾದ ಅತ್ಯಾಧುನಿಕ ಮತ್ತು
ಫಲಪ್ರದವಾದ ಚಿಕಿತ್ಸೆ ಒದಗಿಸುತ್ತದೆ ಎಂದವರು ತಿಳಿಸಿದರು.
ಮೂತ್ರನಾಳ, ಪುರುಷನ ಪ್ರತ್ಯುತ್ಪಾದನ ವ್ಯವಸ್ಥೆಯನ್ನು ಪರಿಶೀಲಿಸಿ ಚಿಕಿತ್ಸೆ ಒದಗಿಸುವ ವೈದ್ಯಶಾಸ್ತ್ರ ಶಾಖೆಯಾದ ಯುರೋಲಜಿ ಇತ್ತೀಚಿನ ವರ್ಷಗಳಲ್ಲಿ ಕ್ರಾಂತಿಕಾರಕ ಬೆಳವಣಿಗೆಯ ಸುಧಾರಣೆ ಕಂಡಿದೆ. ಈ ಪೈಕಿ ರೋಬೋಟಿಕ್ ಸಹಾಯದೊಂದಿಗೆ ಮಾಡಲಾಗುವ ಶಸ್ತ್ರಕ್ರಿಯೆ ಪಂದ್ಯ ಬದಲಿಸುವಂತೆ(ಗೇಂ ಚೇಂಜರ್) ವಿಭಿನ್ನತೆಯಿಂದ ವೈಶಿಷ್ಟ್ಯವಾಗಿದೆ. ವಿಶೇಷವಾಗಿ ಡಾವಿಂಜಿ ಸರ್ಜಿಕಲ್ ಸಿಸ್ಟಂ ಆಗಮನವಾದ ಬಳಿಕ ಇದು ಇನ್ನಷ್ಟುವಮ ಸುಧಾರಿತವಾಗಿದೆ ಎಂದು ಸಿಇಒ ಡಾ. ಅನಂತ ಮೋಹನ ಪೈ ಹೇಳಿದರು.
ರೊಬೋಟಿಕ್ಸ್ ಸರ್ಜರಿ ಎಂದರೇನು?
ಸುಧಾರಿತ ಮತ್ತು ಸುಗಮ, ನಿಯಂತ್ರಿತ ವಿಧಾನಗಳೊಂದಿಗೆ ಸಂಕೀರ್ಣವಾದ ಶಸ್ತ್ರ ಕ್ರಿಯೆ ನಡೆಸಲು ತಜ್ಞ ವೈದ್ಯರು ರೋಬೋಟ್ ಗಳ ಸಹಾಯದಿಂದ ಮಾಡುವ ಶಸ್ತ್ರ ಚಿಕಿತ್ಸೆಯೇ ರೋಬೋಟಿಕ್ ಸರ್ಜರಿ. ಇದರಲ್ಲಿ ವೈದ್ಯರು ಒಂದು ಕನ್ಸೋಲ್ನಲ್ಲಿ ಕುಳಿತು ರೋಬೋಟ್ಗಳನ್ನು ನಿಯಂತ್ರಿಸುತ್ತಾ ,ಅವುಗಳ ಮೂಲಕ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಇದರಿಂದಾಗಿ ಸರ್ಜರಿಯಲ್ಲಿ ನಿಖರತೆ ಮತ್ತು ನಿಯಂತ್ರಣ ಹೆಚ್ಚುತ್ತದೆ.
ಯುರೋಲಜಿಯ ಡಾವಿಂಜಿ ರೋಬೋಟಿಕ್ಸ್
ರೋಬೋಟಿಕ್ ನೆರವಿನ ಶಸ್ತ್ರಕ್ರಿಯೆಗಳನ್ನು ಅವಲಂಬಿಸಿದ ಮೊದಲ ಚಿಕಿತ್ಸಾ ವಿಧಾನವೇ ಯುರೋಲಜಿ. ಇದೀಗ ಯು. ಎಸ್. ನ ರಾಡಿಕಲ್ ಪ್ರೋಸ್ಟೋಕ್ಟಮಿಗಳ ಪೈಕಿ 85ಶೇ. ಮಂದಿ ಕೂಡಾ ರೋಬೋಟಿಕ್ ವಿಧಾನದ ಚಿಕಿತ್ಸಾ ಪದ್ಧತಿಯನ್ನವಲಂಬಿಸುತ್ತದೆ.
ಡಾವಿಂಜಿ ರೋಬೋಟಿಕ್ ಸರ್ಜರಿ ಮೂಲಕ ಚಿಕಿತ್ಸೆ ನೀಡಬೇಕಾದ ಪ್ರಧಾನ ಮೂತ್ರಾಶಯ ರೋಗಗಳು.

1.ಪ್ರೋಸ್ಟಟ್ ಕ್ಯಾನ್ಸರ್
ಕೈಗೊಳ್ಳುವ ಕ್ರಮ : ರೋಬೋಟ್ ಸಹಾಯದೊಂದಿಗೆ ರಾಡಿಕಲ್ ಪ್ರೋಸ್ಟೋಕ್ಟಮಿ(RARP)
(ಪ್ರಯೋಜನಗಳು: ನರಗಳನ್ನು ಸಂಬಂಧಿಸಿದಂತೆ ಖಚಿತವಾದ ಬೇರ್ಪಡಿಸುವಿಕೆ, ಅವಯವಗಳ ಶಕ್ತಿ, ಸಾಮರ್ಥ್ಯ ವರ್ಧನೆ)
2 .ಕಿಡ್ನಿ ಕ್ಯಾನ್ಸರ್
ಕೈಗೊಳ್ಳುವ ಕ್ರಮ: ರೋಬೋಟಿಕ್ ಆಂಶಿಕ ಅಥವಾ ರಾಡಿಕಲ್ ನೈಫ್ರೋಕ್ಟಮಿ
(ಪ್ರಯೋಜನಗಳು: ಅವಯವ ಸಂರಕ್ಷಣೆ, ರಕ್ತನಷ್ಟವಾಗದಂತೆ ತಪ್ಪಿಸುವುದು, ಶೀಘ್ರ ಚೇತರಿಕೆ)
- ಮೂತ್ರಾಶಯ ಕ್ಯಾನ್ಸರ್
ಕೈಗೊಳ್ಳುವ ಕ್ರಮ: ಇಂಟ್ರೋ ಕಾರ್ಪೋರಿಯನ್ ಮೂತ್ರಾಶಯವನ್ನು ದಾರಿ ಬದಲಿಸಿಟ್ಟು ರೌಬೋಟಿಕ್ ರಾಡಿಕಲ್ ಸಿಸ್ಟಕ್ಟಮಿ
(ಪ್ರಯೋಜನ: ಕಡಿಮೆ ಸಂಕೀರ್ಣತೆಯ ದರಗಳು, ಉತ್ಕೃಷ್ಟ ಸೌಂದರ್ಯ ವರ್ಧಕ ಫಲಿತಾಂಶ) - ಯೂರಿಟ್ಟೋರೊಪೈಲ್ವಿಕ್ ಜಂಕ್ಷನ್ ತಡೆ
ಕೈಗೊಳ್ಳುವ ಕ್ರಮ : ರೋಬೋಟಿಕ್ ಪೈಲೋಪ್ಲಸ್ಟಿ
(ಪ್ರಯೋಜನಗಳು : ಉತ್ಕೃಷ್ಟ ಫಲಿತಾಂಶ, ಕಡಿಮೆ ಹಾನಿ)
5 ಯೂರಿಟೈಟಿಕ್ ಸ್ಟ್ರೆಕ್ಚರ್ ಗಳು
ಕೈಗೊಳ್ಳುವ ಕ್ರಮ : ರೋಬೋಟಿಕ್
ಯೂರಿಟರಲ್ ರಿ ಇಂಪ್ಲಾನ್ಟೇಷನ್ ಅಥವಾ ಮರು ನಿರ್ಮಾಣ
(ಪ್ರಯೋಜನಗಳು : ಅತಿ ಸೂಕ್ಷ್ಮ ಟಿಶ್ಯೂ ನಿರ್ವಹಣೆಯಲ್ಲಿ ಖಚಿತವಾದ ಮೇಲ್ಮೈ) - ಅಡ್ರೀನಲ್ ಟ್ಯೂಮರ್ ಗಳು
ಕೈಗೊಳ್ಳುವ ಚಿಕಿತ್ಸಾ ಕ್ರಮ: ರೋಬೋಟಿಕ್ ಅಡ್ರಿನಲಾಕ್ಟಮಿ
ಪ್ರಯೋಜನಗಳು : ಕಡಿಮೆ ಪ್ರವೇಶನ, ದೊಡ್ಡ ಗಾತ್ರದ ಪಾರ್ಶ್ವ ಗಾಯಗಳ ಒಣಗುವಿಕೆ) - ಪೆಲ್ವಿಕ್ ಅವಯವ ಪ್ರೊಲೋಪ್ಸ್ (ಮಹಿಳೆಯರಲ್ಲಿ)
ಕೈಗೊಳ್ಳುವ ಚಿಕಿತ್ಸಾ ಕ್ರಮ: ರೋಬೋಟಿಕ್ ಸೇಕ್ರೋಕಾಲ್ಪೋಪೆಕ್ಸಿ
ಪ್ರಯೋಜನಗಳು : ಶರೀರ ಸುಧಾರಣೆ ಮತ್ತು ಸಶಕ್ತವಾದ ಚೇತರಿಕೆ
8.ಪಿಡಿಯಾಟ್ರಿಕ್ ಯುರಾಲಜಿ
ಕೈಗೊಳ್ಳುವ ಚಿಕಿತ್ಸ ಕ್ರಮ : ರೊಬೋಟಿಕ್ ಸಹಾಯದಿಂದ ಪೈಲೋಪ್ಲಾಸ್ಟಿ ಯುರಿಟರಿ ಇಂಪ್ಲಾಂಟೇಶನ್ ಪ್ರಯಾಜೋನಗಳು: ಉತ್ತಮ ಕಸ್ಮೋಸಿಸ್ ಕಡಿಮೆ ನೋವು
ರೊಬೋಟಿಕ್ ಯೂರೋಟಿಕ್ ಸರ್ಜರಿಯ ಪ್ರಯೋಜನಗಳು. - ಹೈ ಡೆಫಿನಿಷನ್ 3ಡಿ ದೃಷ್ಟಿಯು ಮೆಗ್ನಿಫಿಕೇಶನ್ ಮತ್ತು ದೇಹ ಧಾತು ಉತ್ತಮಪಡಿಸುವಿಕೆ
- ವೈರಲ್ ಫಿಲ್ಟರೇಷನ್ ಮತ್ತು ಸ್ಕೇಲ್ ಮಾಡಿದ ಚಲನೆಗಳು- ಶಸ್ತ್ರಕ್ರಿಯೆ ಮೂಲಕ ಕಚಿತ ಸುಧಾರಾಣೆ
- ಕಡಿಮೆ ಗಾಯಗಳು- ಸಣ್ಣ ಗಾಯಗಳು ನೋವು ನಿವಾರಣೆಗೆ ಮತ್ತು ವೇಗದ ರೋಗ ಶಮನಕ್ಕೆ ಕಾರಣವಾಗುತ್ತದೆ.
- ಕಡಿಮೆ ರಕ್ತ ನಷ್ಟ.
- ಶಸ್ತ್ರಕ್ರಿಯೆಯ ಬಾಳಿಕೆ ಅತಿವೇಗದ ಸುಧಾರಣೆ , ಆಸ್ಪತ್ರೆಯಿಂದ ಡಿಸ್ಚಾರ್ಜ್ ಹಲವು ರೋಗಿಗಳು 24-48ಗಂಟೆಗಳಲ್ಲಿ ಮನೆಗೆ ಮರಳುತ್ತಾರೆ
- ಉತ್ತಮ ಪ್ರವರ್ತನಾ ಸಫಲತೆ- ಮೂತ್ರ ನಿಯಂತ್ರಣ ಮತ್ತು ಲೈಂಗಿಕ ಚಟುವಟಿಕೆಗಳ ಸಂರಕ್ಷಣೆ . ವಿಶೇಷವಾಗಿ ಪ್ರಾಸ್ಟೇಟ್ ಶಸ್ತ್ರಕ್ರಿಯೆಯ ಮೂಲಕ
- ಅಣುಭಾಧೆ ಮತ್ತು ಸಂಕೀರ್ಣ ಸಮಸ್ಯೆಗಳ ಅತಿ ಕಡಿಮೆ ಅಪಾಯ ಸಾಧ್ಯತೆ
ನಮ್ಮ ಕೇಂದ್ರದಲ್ಲಿ ರೊಬೋಟಿಕ್ ಸರ್ಜರಿ ಆಯ್ಕೆ ಮಾಡುವುದು ಯಾವ ಕಾರಣದಿಂದ?
ನಮ್ಮ ನೂತನ ಯುರಾಲಜಿ ಅಂಡ್ ಲೇಸರ್ ಸೆಂಟರ್ನಲ್ಲಿ ಉತ್ಕೃಷ್ಟ ಪರಿಚಯ ಸಂಪನ್ನರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಶೀಲನೆ ಪಡೆದ ಊರೋಲಜಿಸ್ಟ್ಗಳ ತಂಡ ನಿರ್ವಾಸಿಹುವ ಅತ್ಯಾದನುನಿಕ ಡೇವಿಂಚಿ ರೊಬೋಟಿಕ್ ಸರ್ಜರಿ ವ್ಯವಸ್ಥೆ ಇದೆ. ರೋಗಿಯ ಸುರಕ್ಷೆ ಮತ್ತು ಸಂತೃಪ್ತಿ ನಮ್ಮ ಬದ್ಧತೆ.
ಸಂಕೀರ್ಣವಾದ ಕ್ಯಾನ್ಸರ್ರ್ಗಳಿಂದ ಮೊದಲ್ಗೊಂಡು ಪ್ರವರ್ತನಾಪರವಾದ ಮತ್ತು ಪುನರ್ನಿರ್ಮಾಣವಾಗಬಲ್ಲ ಯುರಾಲಜಿ ವರೆಗಿನ ಯುರೋಲಾಜಿಕಲ್ ಸ್ಪೆಕ್ಟ್ರಂನಲ್ಲಿ ತೊಡಗಿಕೊಂಡ ರೊಬೋಟಿಕ್ಸರ್ ಸರ್ಜರಿಗಳ್ಳಲ್ಲಿ ನವೂ ತಜ್ಞತೆ ಪಡೆದಿದ್ದೇವೆ.ವಿಶ್ವ ಮಟ್ಟದ ಉನ್ನತ ಚಿಕಿತ್ಸೆ ಇಲ್ಲಿ ಮನೆಯಲ್ಲೇ ಲಭ್ಯವಿದೆ.
ಮನುಷ್ಯನ ಜ್ಞಾನ ತಜ್ಞತೆಯೊಂದಿಗೆ ತಂತ್ರ ಜ್ಞಾನ ಸಯ್ಯೋಜಿಸಿದ ಚಿಕಿತ್ಸಾ ಕ್ರಮ. ಇದು ಓರ್ವ ತಜ್ಞ ವೈದ್ಯನಿಗೆ ಪರಿಯಾಯವಲ್ಲದಿದ್ದರೂ ಯುರಾಲಾಜಿಕಲ್ ರೋಗಿಗಳ ಪರಿಚಾರಣೆಯ ಗುಣಮಟ್ಟವನ್ನು ಹೆಚಿಸುತ್ತದೆ.
ಬೇಬಿ ಮೆಮೋರಿಯಲ್ ಹಾಸ್ಪಿಟಲ್ ಈ ನಿಟ್ಟಿನಲ್ಲಿ ಬೃಹತ್ ಸಾಧನೆಯನ್ನು ಮಾಡಿದೆ A19* 15 ಸಿಎಂ ಉದ್ದದ 1.26ಜಿಎಂ ತೂಕದ ಬಲ ಭಾಗದ ಅಡ್ರಿನಲ್ ಗ್ರಂಥಿಯನ್ನು ಬೆಸೆದಿದ್ದ ದೊಡ್ಡ ರಿಟ್ರಾಪರಿಟೋನಿಯಲ್ ಗೆಡ್ಡೆಯನ್ನು BMHನಲ್ಲಿ ಹೊರತೆಗಾಯಲಾಯಿತೆಂದು Dr.ಅನಂತಮೋಹನ್ ಪೈ ತಿಳಿಸಿದರು.
ಸೀನಿಯರ್ ಕನ್ಸಲ್ಟಂಟ್ ಯುರೋಲಜಿಸ್ಟ್, ರೋಬೋಟಿಕ್ ಟ್ರಾನ್ಸ್ ಪ್ಲಂಟ್ ಸರ್ಜನ್ ಡಾ. ಕೃಷ್ಣ ಮೋಹನ್ ಆರ್, ಡಾ. ಹರಿಗೋವಿಂದ್ ಪಿ, ಡಾ. ಪಂಕಜ್ ಬಿರುದ್ ಎಂಬಿವರು ಸಂಯುಕ್ತವವಾಗಿ ರೋಬೋಟಿಕ್ ಸರ್ಜರಿ ನಡೆಸಿದರು. ಡಾ. ರಾಜೇಶ್ ಹಾಗೂ ಡಾ. ದೀಪ ಅವರು ಅರಿವಳಿಕಾ ಚಿಕಿತ್ಸೆ ನೀಡಿದರು.
ಹೃದಯಕ್ಕೆ ರಕ್ತ ಚಲಿಸುವ ಶರೀರದ ಪ್ರಧಾನ ಧಮನಿ
ಇನ್ಫೀರಿಯರ್ ವೈನಕೋವ ಜತೆ ಸೇರಿನಿಲ್ಲುವ ದೊಡ್ಡ
ಟ್ಯೂಮರ್ ನಿರ್ಣಾಯಖವಾಗಿತ್ತು. ಕರುಳಿನೊಂದಿಗೆ ಅಂಟಿಕೊಂಡಿರುವ ಮತ್ತು ಬಲಭಾಗದ ಕಿಡ್ನಿ ಕೆಳಭಾಗಕ್ಕೆ ತಳ್ಳಲ್ಪಟ್ಟಂತೆ ಇತ್ತು. ದೇಹದ ಈ ಪ್ರಧಾನ ಮರ್ಮಾಂಗಗಳಿಗೆ
ಹಾನಿಯಾಗದಂತೆ ಸಂರಕ್ಷಿಸಿ ಯಶಸ್ವೀ ಶಸ್ತ್ರ ಚಿಕಿತ್ಸೆ ನೀಡಲಾಗಿದೆ. ನೂತನ ರೋಬೋಟಿಕ್ ತಂತ್ತಜ್ಞಾನ ಬಳಸಿ 4ತಾಸುಗಳಲ್ಲಿ ರಕ್ತ ನಷ್ಟಹೊಂದದೇ ಸಂಪೂರ್ಣ ಗಡ್ಡೆಯನ್ನು ತೆಗೆಯಲು ಸಾಧ್ಯವಾಯಿತೆಂದು ಡಾ. ಕೃಷ್ಣ ಮೋಹನ್ ಹೇಳಿದರು. ಎರ್ಗೋನಮಿಕ್ ಚಲನೆ ಸಾಧ್ಯವಾದ ರೋಬೋಟಿನ ಕೈಗಳು ದೇಹದ ನಿರ್ಣಾಯಕ ಸ್ಥಳಗಳಿಗೆ ತಲುಪಲು ಸಹಾಯ ಒದಗಿಸಿ, ರಕ್ತಸ್ರಾವ ರಹಿತವಾಗಿ ಗಡ್ಡೆಯನ್ನು ದೇಹದಿಂದ ವಿಚ್ಛೇದಿಸಲಾಯಿತು.
ರೋಬೋಟಿಕ್ ಕೈಗಳು ರೋಗಿ ಶರೀರವನ್ನು ಪ್ರವೇಶಿಸುವಾಗ 1ಸೆ.ಮೀ. ಗಾಯಗಳುಳ್ಳ ಒಂದಕ್ಕಿಂತ ಹೆಚ್ಚಿನ ಗಾಯಗಳು ಶಸ್ತ್ರಚಿಕಿತ್ಸೆಯ ಬಳಿಕ ವೇಗದಲ್ಲಿ ಗುಣಮುಖವಾಗುತ್ತದೆ. ಈ ಚಿಕಿತ್ಸೆಗೆ ಕೇವಲ ಕಿಬ್ಬೊಟ್ಟೆಯನ್ನಷ್ಟೇ ಗಾಯ ಮಾಡಬೇಕಾಗುತ್ತದೆ. ಚಿಕಿತ್ಸೆಗೊಳಗಾದ ರೋಗಿಯನ್ನು ಕೇವಲ 12ವತಾಸಿನಲ್ಲಿಲಸಹಜ ಸ್ಥಿತಿಗೆ ಮರಳಿ ತಂದು, ಕೇವಲ 4 ದಿನದಲ್ಲೇ ದಿಸ್ಚಾರ್ಜ್ ಮಾಡಲಾಯಿತು.
ಇಷ್ಟು ದೊಡ್ಡ ಗಾತ್ರದ ಟ್ಯೂಮರ್ ತೆಗೆಯಬೇಕಾದರೆ ಓಪನ್ ಶಸ್ತ್ರಕ್ರಿಯೆ ಮೂಲಕ ಎದೆ, ಹೊಟ್ಟೆ ತೆರೆಯಬೇಕಾಗುತ್ತದೆ. ಅದಲ್ಲದಿದ್ದರೆ ಬೃಹತ್ ಗಾತ್ರದ ಲಾಪ್ರೊಟಮಿ ಗಾಯ ಅಗತ್ಯ. ಇದಕ್ಕೆ ದೀರ್ಘಾವಧಿ ಐಸಿಯು ಪರಿಚರಣೆ ಬೇಕಾಗುತ್ತದೆ. ಅಲ್ಲದೇ ಹೆಚ್ಚು ದಿನ ಆಸ್ಪತ್ರೆಯಲ್ಲುಳಿಯಬೇಕಾಗುತ್ತದೆ. ಬಿ. ಎಂ. ಎಚ್/ಎಚ್.ಏಂಡ್ ಕೆ ಯುರೋಲಜಜಿ ವಿಭಾಗದ ರೋಬೋಟಿಕ್ ಸರ್ಜರಿಯ ತಜ್ಞತೆಯ ಪರಿಣತಿ ಮತ್ತು ಅತ್ಯಾಧುನಿಕ ಗುಣಮಟ್ಟದ ಆರೋಗ್ಯ ಸಂರಕ್ಷಣೆ ನೀಡುವ ಕಾಳಜಿಯ ಸಮರ್ಪಣೆಯಿಂದಲೇ ಇದು ಸಾಧ್ಯವಾಯಿತೆಂದು ಸಿಇ ಒ ಡಾ. ಅನಂತ ಮೋಹನ ಪೈ ಹೇಳಿದರು.
ಡಾ. ಹರಿಗೋವಿಂದ್ ಪಿ, ಡಾ. ಆರ್. ಕೃಷ್ಣಮೋಹನ್ ರೋಬೋಟಿಕ್ ಸರ್ಜರಿಯ ಕುರಿತಾದ ಸಂದೇಹ,ಗೊಂದಲದ ಪ್ರಶ್ನೆಗಳಿಗೆ ಉತ್ತರಿಸಿದರು.
ಡಾ. ಪಂಕಜ್ ಬಿರುದ್ ವಂದಿಸಿದರು.
ಬೇಬಿ ಮೆಮೋರಿಯಲ್ ಹಾಸ್ಪಿಟಲ್ ಗ್ರೂಪಿನ ಕುರಿತು
Dr. ಕೆ ಜಿ ಅಲೆಕ್ಸಾಂಡರ್ 1987ರಲ್ಲಿ ಸ್ಥಾಪಿಸಿದ ಬೇಬಿ ಮೆಮೋರಿಯಲ್ ಹಾಸ್ಪಿಟಲ್ ಗ್ರೂಪ್ (BMH) ಆರೋಗ್ಯ ರಕ್ಷಣಾ ರಂಗದಲ್ಲಿ ಕೇರಳದಲ್ಲಿ no-1 ಎಂದೇ ಜನಪ್ರಿಯವಾಗಿದೆ. ಕೋಝಿಕೋಡ್ ಕಣ್ಣೂರು ತೊಡುಪೂಝ ಪಯ್ಯನ್ನೂರು ಮೊದಲಾದೆಡೆ ಅತ್ಯಾಧುನಿಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು , ಪೆರುಂಬವೂರ್ ಮತ್ತು ವಡಗರ ದಲ್ಲಿ ಹೊಸ ಕೇಂದ್ರಗಳು ಬರುತ್ತಿವೆ. ಇದರೊಂದಿಗೆ ಆರೋಗ್ಯ ರಂಗದಲ್ಲಿ ಮತ್ತಷ್ಟು ಮುನ್ನಡೆಯನ್ನು ನಿರೀಕ್ಷಿಸಿದೆ. ಉನ್ನತ ಗುಣಮಟ್ಟದೊಂದಿಗೆ ಅತೀ ವಿನೂತನ ತಂತ್ರ ಜ್ಞಾನದ ಚಿಕಿತ್ಸಾ ಉಪಕರಣಗಳು ಮತ್ತು ಸಾಮಾಜಿಕ ಹಿತ ದೃಷ್ಟಿಯ ಕಾರುಣ್ಯ ಪೂರಿತ ಚಿಕಿತ್ಸೆ ರೋಗಿಗಳ ಪರಿಚಾರಣೆ ಎಂಬುದು ನಮ್ಮ ವೈಶಿಷ್ಟ್ಯ.
50ಕ್ಕೂ ಹೆಚ್ಚು ಸ್ಪೆಷಾಲಿಸ್ಟ್ಗಳು ಮತ್ತು ಕ್ಲಿನಿಕಲ್ ಶ್ರೇಷ್ಠತೆಯ ಪರಂಪರೆಯು ಭರವಸೆಯ ಚಿಕಿತ್ಸೆಯನ್ನು ವಾಗ್ದಾನ ನೀಡುವ BMH ಅದರ ಪ್ರಧಾನ ಆಶಯವಾದ More than care ಆಶಯದೊಂದಿಗೆ ಮುನ್ನಡೆಯುತ್ತಿದೆ. ಅತ್ಯಾಧುನಿಕ ಚಿಕಿತ್ಸೆಗಳು , ರೊಬೋಟಿಕ್ ಶಸ್ತ್ರಕ್ರಿಯೆಗಳಿಂದ ಮೊದಲ್ಗೊಂಡು ಸಾಮಾಜಿಕ ಆರೋಗ್ಯ ರಂಗದ ಕುರಿತಾಗಿ ಬದ್ಧತೆಯಿಂದ ಕಾರ್ಯವೆಸಗುತ್ತದೆ.
ಕೋಝಿಕೋಡ್ ಬೇಬಿ ಮೆಮೊರಿಯಲ್ ಹಾಸ್ಪಿಟಲ್
ಬೇಬಿ ಮೆಮೋರಿಯಲ್ ಹಾಸ್ಪಿಟಲ್ (BMH)1987ರಲ್ಲಿ ಕೋಝಿಕೋಡ್ ನಲ್ಲಿ ಕಾರ್ಯಾರಂಭವಾಯಿತು . 500ಕ್ಕೂ ಅಧಿಕ ಹಾಸಿಗೆಗಳುಳ್ಳ ಕೇರಳದ ಮುಂಚೂಣಿಯ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಇದಾಗಿದೆ. ದಕ್ಷತೆಯಿಂದ ಅದು ಯಶಸ್ಸಿನ್ನ ಮೆಟ್ಟಿಲೇರುತ್ತದೆ. More than careಎಂಬುದು ಇಲ್ಲಿ ಪ್ರತಿಯೊಬ್ಬರ ಎದೆಯನ್ನು ಮುಟ್ಟುತ್ತದೆ. 40ಕ್ಕೂ ಅಧಿಕ ಮೆಡಿಕಲ್ ಸರ್ಜಿಕಲ್ ಸ್ಪೆಶಾಲಿಟಿಗಳು ಇಲ್ಲಿ ಸದಾ ಕಾರ್ಯನಿರತವಾಗಿದೆ. ಸುಸಜ್ಜಿತ ಮೂಲಭೂತ ಸೌಕರ್ಯಗಳೊಂದಿಗೆ ಉನ್ನತ ಶ್ರೇಣಿಯ ಅನುಭವಿ ಕನ್ಸಲ್ಟೆಂಟುಗಳು ಇಲ್ಲಿ ಸಮಗ್ರ ಸೇವೆ ನೀಡುತ್ತಿದ್ದಾರೆ ಚಿಕಿತ್ಸಾ ರಂಗದ ಶ್ರೇಯಸ್ಸಿನಿಂದ ಗಮನ ಸೆಳೆದ ಸಂಸ್ಥೆ NABH- ಅಂಗೀಕಾರ ಪಡೆದಿದೆ.