ಕುಕ್ಕುಜಡ್ಕ: ಚೊಕ್ಕಾಡಿ ಪ್ರೌಡ ಶಾಲೆ ,ಕುಕ್ಕುಜಡ್ಕದಲ್ಲಿ ಅಮರ ಸಂಘಟನಾ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ದಿ.ಮುರಾರಿ ಕಡಪಳ ಮತ್ತು ದಿ. ನವೀನ್ ಸಂಕೇಶ ಸ್ಮರಣಾರ್ಥ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಮತ್ತು ಪೈಲಾರು ಪ್ರಿಮೀಯರ್ ಸಂಘಟನಾ ಸಮಿತಿ ಸಹಯೋಗದೊಂದಿಗೆ
ಬೃಹತ್ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೈಲಾರು ಪ್ರಿಮೀಯರ್ ಲೀಗ್ ಸಂಘಟನಾ ಸಮಿತಿಯ ವ್ಯವಸ್ಥಾಪಕ ಹರ್ಷೀತ್ ಜಿ ಜೆ ವಹಿಸಿದ್ದರು.ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಮೇಡಿಕಲ್ ಅಫಿಸರ್ ಡಾ. ರಾಮಚಂದ್ರ ಭಟ್ , ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿಯ ಸಂಚಾಲಕರಾದ ರಾಧಕೃಷ್ಣ ಬೊಳ್ಳೂರು ,ಅಮರ ಸಂಘಟನಾ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ಕುಲಾಲ್ , ದಿ.ಮುರಾರಿ ಕಡಪಳರವರ ಪತ್ನಿ ವಾರೀಜ ಕಡಪಳ , ದಿನವೀನ್ ಸಂಕೇಶರ ಸಹೋದರಿ ಕವೀತಾ ಸಂಕೇಶ ಇವರುಗಳು ಉಪಸ್ಥಿತರಿದ್ದರು. ಪ್ರದೀಪ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ವಿಗೆ ಅಮರ ಸಂಘಟನಾ ಸಮಿತಿಯ ಎಲ್ಲ ಸದಸ್ಯರು ಸಹಕರಿಸಿದರು.











