ಬೆಳ್ಳಾರೆ:ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ನ ವಸಂತ ಸಂಭ್ರಮ ಕಾರ್ಯಕ್ರಮ ಜ.3,4 ಮತ್ತು 5ರಂದು ವಿವಿಧ ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಸಲಾಗುವುದು. ಮೂರು ದಿನದ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಳ್ಳುತಿದೆ ಎಂದು ವಸಂತ ಸಂಭ್ರಮ ಸಮಿತಿ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಸಂತ ಸಂಭ್ರಮ ಸಮಿತಿ ಅಧ್ಯಕ್ಷೆ ರಾಜೀವಿ ಆರ್ ರೈ ಹಾಗೂ ಸಂಚಾಲಕರಾದ ಎಸ್.ಎನ್.ಮನ್ಮಥ ವಿವರ ನೀಡಿದರು.
ಪ್ರಾಥಮಿಕ ಶಾಲಾ ವಿಭಾಗದ ‘ಶತಮಾನೋತ್ತರ, ಪ್ರೌಢಶಾಲಾ ವಿಭಾಗದ

‘ಅಮೃತ’ ಪದವಿ ಪೂರ್ವ ಕಾಲೇಜಿನ ‘ಸ್ವರ್ಣ ಸಂಭ್ರಮವನ್ನು ಒಟ್ಟಾಗಿ ವಸಂತ ಸಂಭ್ರಮ ಕಾರ್ಯಕ್ರಮವಾಗಿ ಆಚರಿಸಲಾಗುವುದು. ಜ.3ರಂದು ಪೂ. 9ಕ್ಕೆ ಬೆಳ್ಳಾರೆ ಮೇಲಿನ ಪೇಟೆಯಿಂದ ನಾಸಿಕ್ ಬ್ಯಾಂಡ್ನೊಂದಿಗೆ ಆಕರ್ಷಕ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಈ
‘ಶೈಕ್ಷಣಿಕ ದಿಬ್ಬಣ’ಕ್ಕೆ ಬೆಳ್ಳಾರೆ ಪೊಲೀಸ್ ಉಪನಿರೀಕ್ಷಕರಾದ ಈರಯ್ಯ ದೂಂತೂರು ಚಾಲನೆ ನೀಡುವರು.ಬಳಿಕ ಧ್ವಜಾರೋಹಣವನ್ನು ಗ್ರಾ.ಪಂ.ಅಧ್ಯಕ್ಷೆ ನಮಿತಾ ಎಲ್. ರೈ ನೆರವೇರಿಸುವರು
ಪೂ.10ರಿಂದ ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿದೆ. ಪದವಿ ಪೂರ್ವ ವಿಭಾಗದ ನೂತನ 3 ಕೊಠಡಿಗಳು, ಪ್ರಾಥಮಿಕ ಶಾಲೆಗೆ
ಒಸಾಟ್ ಪ್ರಯೋಜಕತ್ವದ 8 ಕೊಠಡಿಗಳು, ನವೀಕೃತ ಕ್ರೀಡಾಂಗಣ, ಪ್ರಾಥಮಿಕ ಶಾಲೆಗೆ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹಾಗೂ ದಾನಿಗಳ ನೆರವಿನಿಂದ ಪ್ರಾಥಮಿಕ ಶಾಲೆಗೆ ನಿರ್ಮಿಸಿದ 3 ತರಗತಿ ಕೊಠಡಿಗಳ ಉದ್ಘಾಟನೆ ನಡೆಯಲಿದೆ.ಪೂ. 10.30ಕ್ಕೆ
ವಸಂತ ಸಂಭ್ರಮ ಕಾರ್ಯಕ್ರಮವನ್ನು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಉದ್ಘಾಟಿಸುವರು.
ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸುವರು.ವಿಶೇಷ ಆಹ್ವಾನಿತರಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಭಾಗವಹಿಸುವರು.’ವಸಂತ ಸಂಭ್ರಮ” ಸ್ಮರಣ ಸಂಚಿಕೆಯನ್ನು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಬಿಡುಗಡೆ ಮಾಡುವರು.ಮುಖ್ಯ ಅತಿಥಿಗಳಾಗಿ

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ರಾಜ್ಯಸಭಾ ಸದಸ್ಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜ, ಕೆ. ಪ್ರತಾಪ್ ಸಿಂಹ ನಾಯಕ್, ಮಂಜುನಾಥ ಭಂಡಾರಿ, ಧನಂಜಯ ಸರ್ಜಿ, ಕಿಶೋರ್ ಕುಮಾರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಹಾಗೂ ವಿವಿಧ ಅಕಾಡೆಮಿಗಳ ಅಧ್ಯಕ್ಷರುಗಳು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅಪರಾಹ್ನ 2 ರಿಂದ ಸಾಂಸ್ಕೃತಿಕ ಮತ್ತು ಕಲಾ ಕಾರ್ಯಕ್ರಮಗಳು, ಸಂಜೆ 7ರಿಂದ ಕಾಪಿಕಾಡ್- ವಾಮಂಜೂರು-ಸಾಯಿ ಅಭಿನಯದ ತುಳು ಹಾಸ್ಯಮಯ ನಾಟಕ ‘ಏರ್ಲಾ ಗ್ಯಾರಂಟಿ ಅತ್ತ್’ ಪ್ರದರ್ಶನಗೊಳ್ಳಲಿದೆ.
ಜ.4ರಂದು ಪೂ. 9.30ರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ.ಅಪರಾಹ್ನ 3ರಿಂದ ಸನ್ಮಾನ ಸಮಾರಂಭ ನಡೆಯಲಿದೆ.
ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ಅಧ್ಯಕ್ಷತೆ ವಹಿಸುವರು. ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸಹಕಾರರತ್ನ ಕೆ.ಸೀತಾರಾಮ ರೈ ಸವಣೂರು ಸನ್ಮಾನ ನೆರವೇರಿಸುವರು.ವಿಶೇಷ ಆಹ್ವಾನಿತರಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಜಬ್ಬ ಹರೇಕಳ ಭಾಗವಹಿಸುವರು. ವಿಶೇಷ ಸಾಧಕರನ್ನು, ಕೆ.ಪಿ.ಎಸ್. ಶಾಲೆಯಲ್ಲಿ ಪ್ರಾಂಶುಪಾಲರಾಗಿ, ಉಪಪ್ರಾಂಶುಪಾಲರಾಗಿ, ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ಸಲ್ಲಿಸಿ ಸೇವಾ ನಿವೃತ್ತಿಯನ್ನು ಹೊಂದಿದವರು ಹಾಗೂ ನಿರಂತರ 15 ವರ್ಷಗಳು ಹಾಗೂ ಅದಕ್ಕಿಂತ ಮೇಲ್ಪಟ್ಟು ಸೇವೆ ಸಲ್ಲಿಸಿದ ಶಿಕ್ಷಕರನ್ನು, ವಿಶೇಷ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು.
ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 6.30ರಿಂದ ವಿ.ಜೆ. ವಿಖ್ಯಾತ್ ಮತ್ತು ಬಳಗದವರಿಂದ
‘ಸಾಂಸ್ಕೃತಿಕ ರಸ ಸಂಜೆ ನಡೆಯಲಿದೆ.

ಜ.5ರಂದು ಪೂ.9.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು,
ಅಪರಾಹ್ನ 2.30ರಿಂದ : ‘ವಸಂತ ಸಂಭ್ರಮ’ ಸಮಾರೋಪ ಸಮಾರಂಭ ನಡೆಯಲಿದೆ.ವಸಂತ ಸಂಭ್ರಮ ಸಮಿತಿ ಗೌರವಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆ ವಹಿಸುವರು.ವಿಶೇಷ ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ
ದಿನೇಶ್ ಗುಂಡೂರಾವ್ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ಮಾಜಿ ಶಾಸಕ ಕೆ.ಕುಶಲ, ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಪುತ್ತೂರು ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ ಮತ್ತಿತರರು ಭಾಗವಹಿಸಲಿದ್ದಾರೆ.ರಾಮಕೃಷ್ಣ ಭಟ್ ಚೂಂತಾರು ಅವರು ವಸಂತ ಸಂಭ್ರಮದ ಅವಲೋಕನ ಮಾತುಗಳನ್ನಾಡುವರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ.ಸಂಜೆ 5 ರಿಂದ 6-00ರ ತನಕ ಹಳೆ ವಿದ್ಯಾರ್ಥಿ ಸಂಗಮ ನಡೆಯಲಿದೆ.ಸಂಜೆ 6.30ರಿಂದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಕಲಾ ತಂಡದಿಂದ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ನಡೆಯಲಿದೆ.
ಅಲ್ಲಸೆ ಜ.2ರಂದು ಪೂ.10 ರಿಂದ ‘ಅಧ್ಯಯನ-ಅಧ್ಯಾಪನ’ ಉಪನ್ಯಾಸ ಹಾಗೂ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.
ವಿಶ್ರಾಂತ ಪ್ರಾಂಶುಪಾಲರಾದ ಸೂರನಾರಾಯಣ ಬಿ. ವಿ. ಅಧ್ಯಕ್ಷತೆ ವಹಿಸುವರು ಖ್ಯಾತ ಚಿಂತಕರು, ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಎಂ. ಕೃಷ್ಣೇ ಗೌಡ ಉಪನ್ಯಾಸ ನೀಡುವರು ಎಂದು ರಾಜೀವಿ ಆರ್ ರೈ ಹಾಗೂ ಎಸ್.ಎನ್.ಮನ್ಮಥ ವಿವರಿಸಿದರು.
ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು:
ವಸಂತ ಸಂಭ್ರಮದ ಅಂಗವಾಗಿ ಕೆಪಿಎಸ್ ಬೆಳ್ಳಾರೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಾಥಮಿಕ ಶಾಲಾ ವಿಭಾಗಕ್ಕೆ 1.5 ಕೋಟಿ ವೆಚ್ಚದಲ್ಲಿ ಒಸಾಟ್ ವತಿಯಿಂದ 8 ತರಗತಿ ಕೊಠಡಿ ಹಾಗೂ 2 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರ 5 ಲಕ್ಷ ಅನುದಾನ ಹಾಗೂ ಊರ ದಾನಿಗಳ ನೆರವಿನಿಂದ ಮೂರು ತರಗತಿ ಕೊಠಡಿ ನಿರ್ಮಿಸಲಾಗಿದೆ. ಸರಕಾರದಿಂದ ಪದವಿಪೂರ್ವ ವಿಭಾಗಕ್ಕೆ 3 ವಿವೇಕ ಕೊಠಡಿ ನಿರ್ಮಿಸಲಾಗಿದೆ. 15 ಲಕ್ಷ ರೂ ವೆಚ್ಚದಲ್ಲಿ ಕ್ರೀಡಾಂಗಣವನ್ನು ನವೀಕರಿಸಲಾಗಿದೆ. ಆವರಣ ಗೋಡೆ, ಎರಡು ದ್ವಾರಗಳನ್ನು ನಿರ್ಮಿಸಲಾಗಿದೆ. ಇಂಟರ್ಲಾಕ್ ಅಳವಡಿಕೆ ಮಾಡಲಾಗಿದೆ. ಕೆಪಿಎಸ್ನಲ್ಲಿ ಎಲ್ಕೆಜಿಯಿಂದ ಪಿಯುಸಿ ತನಕ 1450 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ವಸಂತ ಸಂಭ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ, ಎಸ್ಡಿಎಂಸಿ ಉಪಾಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ,ಪ್ರಾಂಶುಪಾಲರಾದ ಜನಾರ್ದನ ಕೆ. ಎನ್. ಉಪಪ್ರಾಂಶುಪಾಲರಾದ ಉಮಾಕುಮಾರಿ, ಶಾಲಾ ಮುಖ್ಯ ಶಿಕ್ಷಕ ಮಾಯಿಲಪ್ಪ ಜಿ.ಸಂಭ್ರಮ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಪನ್ನೆ, ಪದಾಧಿಕಾರಿಗಳಾದ ಓವಿನ್ ಪಿಂಟೋ, ಶರತ್ ಪೂಗವನ, ಹರ್ಷ ಜೋಗಿಬೆಟ್ಟು, ಜಯರಾಮ ಉಮಿಕ್ಕಳ, ನಾಗೇಶ್ ಕುಲಾಲ್, ಮುರಳೀಕೃಷ್ಣ ತಡಗಜೆ, ಕೃಷ್ಣಪ್ರಸಾದ್ ಕುತ್ಯಾಡಿ, ರಾಮಚಂದ್ರ ಭಟ್ ಮುಗುಳಿ, ಪ್ರೇಮಚಂದ್ರ ಬೆಳ್ಳಾರೆ,ಪೃಥ್ವಿರಾಜ್, ಲೋಕೇಶ್ ಬೆಳ್ಳಾರೆ, ಶಿವಾಜಿ ಮತ್ತಿತರರು ಉಪಸ್ಥಿತರಿದ್ದರು.