ಸುಳ್ಯ:ಕೃಷಿ ಇಲಾಖೆ ಸುಳ್ಯ, ರೈತ ಉತ್ಪಾದಕ ಕಂಪೆನಿ ಇದರ ಸಹಯೋಗದೊಂದಿಗೆ ಹಡಿಲು ಗದ್ದೆ ಬೇಸಾಯ ಕಾರ್ಯಕ್ರಮ ಕಳಂಜ ಗ್ರಾಮದ ಮಣಿಮಜಲಿನಲ್ಲಿ ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಎಲ್ಲಡೆ ಗದ್ದೆ ಬೇಸಾಯ ಹಾಗೂ ಭತ್ತದ ನಾಟಿಗಳು ನಡೆಯುತ್ತಿದ್ದವು ಆದರೆ ಇದೀಗ ಈ ರೀತಿಯ ಕಾರ್ಯಕ್ರಮಗಳ ಮೂಲಕ
ಭತ್ತ ಬೇಸಾಯ ಮಾಡಬೇಕಾಗಿದೆ. ಹಡಿಲು ಬಿದ್ದ ಗದ್ದೆಗಳನ್ನು ಬೇಸಾಯ ಮಾಡುವ ಮೂಲಕ ಭತ್ತ ನಾಟಿಗೆ ಹೆಚ್ಚಿನ ಆದ್ಯತೆ ಎಲ್ಲರೂ ನೀಡಬೇಕು ಹಾಗೂ ಇಲಾಖೆಯು ಇದಕ್ಕೆ ಪೂರಕವಾಗಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೈತ ಉತ್ಪಾದಕ ಕಂಪೆನಿ ಅಧ್ಯಕ್ಷ ವೀರಪ್ಪ ಗೌಡ ಕಣ್ಣಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಬೇರಿಕೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್, ಸುಳ್ಯ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕುಸುಮಾಧರ ಎ.ಟಿ, ರೈತ ಉತ್ಪಾದಕ ಕಂಪೆನಿಯ ನಿರ್ದೆಶಕಿ ಮಧುರಾ ಎಂ.ಆರ್, ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀನಾಥ್ ರೈ ಬಾಳಿಲ, ಭಾಸ್ಕರನ್ ನಾಯರ್, ಗೋವಿಂದ ಅಳವುಪಾದೆ, ಜಯಕುಮಾರ್ ಮಡಪ್ಪಾಡಿ, ಅಜಿತ್ ರಾವ್ ಕಿಲಂಗೋಡಿ ಮತ್ತಿತರರು ಉಪಸ್ಥಿತರಿದ್ದರು.
ಹಡಿಲು ಬಿದ್ದ ಗದ್ದೆಯಲ್ಲಿ ಯಾಂತ್ರಿಕೃತ ನಾಟಿಯನ್ನು
ಶಾಸಕಿ ಭಾಗೀರಥಿ ಮುರುಳ್ಯ ಟ್ಯಾಕ್ಟರ್ನಲ್ಲಿ ತೆರಳಿ ವೀಕ್ಷಿಸಿದರು.
ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ ಮಾಡುತ್ತಿದ್ದ ತಳಿಯಾದ ಸಹ್ಯಾದಿ ಬ್ರಹ್ಮ ತಳಿಯನ್ನು ಇಲ್ಲಿ 1.23 ಎಕರೆಯಲ್ಲಿ ನಾಟಿ ಮಾಡಲಾಗಿದೆ. ಜೊತೆಗೆ ಈ ಬಾರಿ ಸುಳ್ಯದಲ್ಲಿ ಸುಮಾರು 10 ಎಕರೆಗಳಲ್ಲಿ ಭತ್ತನಾಟಿ ಮಾಡಲು ಯೋಜನೆ ಹಾಕಲಾಗಿದ್ದು, ಈಗಾಗಲೇ 6 ಎಕರೆ ಹಡಿಲು ಭೂಮಿಯಲ್ಲಿ ಬೇಸಾಯ ಮಾಡಲಾಗಿದೆ. ಜೊತೆಗೆ ಅವರಿಗೆ ಉಚಿತವಾಗಿ ಔಷಧಿಗಳನ್ನು ನೀಡಲಿದ್ದೇವೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ತಿಳಿಸಿದ್ದಾರೆ.














