ಸುಳ್ಯ:ಮಕ್ಕಳ ಬದುಕಿನ ವರ್ಣ ಲೋಕ ಬೇಸಿಗೆ ರಜಾ ದಿನಗಳು.ಆ ಬೇಸಿಗೆ ರಜೆಯನ್ನು ಇನ್ನಷ್ಟು ಆಕರ್ಷಕವಾಗಿಸಲು ಬಣ್ಣ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಸುಳ್ಯದ ಸಾಂಸ್ಕೃತಿಕ ಮತ್ತು ಕಲಾ ಶಾಲೆ ರಂಗಮಯೂರಿಯ ರಾಜ್ಯಮಟ್ಟದ ಬೇಸಿಗೆ ಶಿಬಿರ ‘ಬಣ್ಣ’. ಕಳೆದ ಹಲವು ವರ್ಷಗಳಿಂದ ಆಕರ್ಷಕ ಮತ್ತು ವೈವಿಧ್ಯಮಯ ಶಿಬಿರವಾಗಿ ಮೂಡಿ ಬರುತ್ತಿರುವ ರಂಗಮಯೂರಿಯ ಶಿಬಿರದ ಬಣ್ಣದ ಲೋಕ ಎಪ್ರಿಲ್ 12ರಿಂದ ತೆರೆದುಕೊಳ್ಳಲಿದೆ. ಎಪ್ರಿಲ್ 12 ರಿಂದ 20ರ ತನಕ
ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ ಬಣ್ಣ ಶಿಬಿರ ನಡೆಯಲಿದೆ. ಪ್ರಶಾಂತ ಸುಂದರ ವಾತಾವರಣದಲ್ಲಿ

ಪ್ರಕೃತಿಯೊಡನೆ ಬೆರೆತು ಹಾಡು,ನಗು ಖುಷಿಯೊಂದಿಗೆ ನಲಿಯುವ ಸುಂದರ ಶಿಬಿರ ಇದು. ಎಲ್ಲರೂ ಒಂದಾಗಿ ಒಂದೇ ಸೂರಿನಡಿ ಹಾಡಿ ಕುಣಿಯುವ ಸಮಯ, ಹಾಡುಗಳು, ಪಾಡ್ದನಗಳು, ಕುಣಿತ, ನಾಟಕ.. ಸಂಪನ್ಮೂಲ ವ್ಯಕಿಗಳ ಜೊತೆಗೆ ಇಪ್ಪತ್ತಕ್ಕೂ ಹೆಚ್ಚು ಮೇಲ್ವಿಚಾರಕರು
ಕಳೆದ 6 ವರ್ಷದಿಂದ ಮಕ್ಕಳ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ ರಂಗ ಮಯೂರಿ ಕಲಾಶಾಲೆ
ರಾಜ್ಯಮಟ್ಟದ ಅತ್ಯುತ್ತಮ ಕಲಾಶಾಲೆಗಳಲ್ಲಿ ಒಂದು. ಹೌದು ಏ.12ರಿಂದ 20ರ ತನಕ ಕಾಯರ್ತೋಡಿಯಲ್ಲಿ ತೆರೆದು ಕೊಳ್ಳಲಿದೆ ‘ಬಣ್ಣದ ಲೋಕ’: ರಂಗಮಯೂರಿ ಕಲಾಶಾಲೆಯ ಆಕರ್ಷಕ ಬೇಸಿಗೆ ಶಿಬಿರಕ್ಕೆ ದಿನ ಗಣನೆ- ನೋಂದಾವಣೆ ಅಂತಿಮ ಹಂತದಲ್ಲಿದೆ. ಸೀಮಿತ ಸಂಖ್ಯೆ ಶಿಬಿರಾರ್ಥಿಗಳಿಗೆ ಅವಕಾಶ ಇದ್ದು ಮೊದಲು ನೋಂದಾವಣೆ ಮಾಡಿದವರಿಗೆ ಆದ್ಯತೆ ನೀಡಲಾಗುತ್ತದೆ.ಭಾಷೆ ಶುದ್ಧಿ, ಅಭಿನಯ ಪ್ರಧಾನ ಮಕ್ಕಳ ನಗುವಿನ ಬೇಸಿಗೆ ಶಿಬಿರ ಇದಾಗಿರಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಅಭಿನಯ ಪ್ರಧಾನ ಮಕ್ಕಳ ನಗುವಿನ ಬೇಸಿಗೆ ಶಿಬಿರ ಆಯೋಜಿಸಿ ವಿದ್ಯಾರ್ಥಿಗಳ ಕನಸು ನನಸಾಗಿಸುವ ವೇದಿಕೆ ಒದಗಿಸುವುದು ಸಂಘಟಕರ ಆಶಯ. ಮಕ್ಕಳ ಪುಟಾಣಿ ಪ್ರಪಂಚದಲ್ಲಿ ಕಲೆ, ಸಾಹಿತ್ಯಕ್ಕೆ ಒತ್ತು ನೀಡಿ, ಗ್ರಾಮೀಣ ಮಕ್ಕಳ ಕನಸನ್ನ ಉತ್ತುಂಗಕ್ಕೆ ಏರಿಸುವ ಕಾರ್ಯ ಬಣ್ಣ ಶಿಬಿರದ ಮೂಲಕ ಮಾಡಲಾಗುತ್ತಿದೆ. ಶಿಬಿರದ ವಿಶೇಷವೆಂದರೆ ಈ ಬಾರಿ ಮಕ್ಕಳಲ್ಲಿ ಬಹುಭಾಷಾ ವೈವಿಧ್ಯತೆಯ ಜೊತೆ ಹೊಸ ಕ್ರಿಯಾತ್ಮಕ ಯೋಜನೆಯೊಂದಿಗೆ ಶಿಬಿರ ಮೂಡಿಬರಲಿದೆ. ಹೆಸರಾಂತ ರಂಗಸಂಸ್ಥೆಗಳಾದ ನೀನಾಸಂ, ರಂಗಾಯಣ, ರಂಗ ಅಧ್ಯಯನ ಕೇಂದ್ರ, ಶಿವಸಂಚಾರದ ನಾಟಕ ನಿರ್ದೇಶಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ.
ಅಭಿನಯ ಪ್ರಧಾನ ರಂಗ ತರಬೇತಿಯೊಂದಿಗೆ ನಾಟಕ ರೂಪಕಗಳ

ಹಬ್ಬದ ಜೊತೆ, ಕನ್ನಡ ,ಅರೆಭಾಷೆ ,ತುಳು, ಹಿಂದಿ, ಇಂಗ್ಲೀಷ್ ಭಾಷಾ ವೈವಿಧ್ಯ ನಾಟಕಗಳೊಂದಿಗೆ, ನವರಸಗಳ ಅಭಿನಯ ಕಾರ್ಯಾಗಾರವೂ ನಡೆಯಲಿದೆ. ಭಾಷಾ ಶುಧ್ದಿ, ಸ್ಪಷ್ಟ ಉಚ್ಚಾರಣೆ, ರಂಗ ಚಲನೆ, ರಂಗ ಸಂಗೀತ, ರಂಗ ಪರಿಕರ ತಯಾರಿ, ರಂಗ ಪ್ರಸಾಧನ ಕಾರ್ಯಾಗಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು.ಬಹುಭಾಷಾ ನಾಟಕಗಳ ಕಲಿಕೆ ಮತ್ತು ಅಭಿನಯ ಕಾರ್ಯಾಗಾರ ಹಾಗೂ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು.ಕನ್ನಡ ತುಳು, ಅರೆಭಾಷೆ, ಇಂಗ್ಲೀಷ್, ಹಿಂದಿ ನಾಟಕಗಳ ಸಂಗಮ, ಭಾಷಾ ಪರಿಚಯ ಶಿಬಿರದ ವಿಶೇಷತೆಯಾಗಿದೆ ಬಹುಭಾಷಾ ರಂಗ ತರಬೇತಿ ಅಪರೂಪದ ಪ್ರಯೋಗವಾಗಿದೆ.
ಪ್ರತೀ ಮಗುವಿಗೂ ದೈವ ಭಕ್ತಿಯ ಪಾಠ, ಸಹಭೋಜನ, ಆಟ ಪಾಠ ತರಬೇತಿಗೆ ವಿಶಾಲ ಸಭಾಂಗಣ, ಸ್ವಚ್ಛ ಗಾಳಿ, ಬೆಳಕು, ಕುಡಿಯುವ ನೀರು, ಅಚ್ಚುಕಟ್ಟಾದ ಶೌಚಾಲಯ ವ್ಯವಸ್ಥೆ ಜೊತೆಗೆ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ತರಬೇತುದಾರರು, ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. 7ವಯಸ್ಸಿನಿಂದ 17 ವಯಸ್ಸಿನ ಮಕ್ಕಳಿಗೆ ಶಿಬಿರದಲ್ಲಿ

ಭಾಗವಹಿಸುವ ಅವಕಾಶ ನೀಡಲಾಗಿದೆ. ಬೆಳಿಗ್ಗೆ 8.45ರಿಂದ ಸಂಜೆ 5 ಗಂಟೆಯ ತನಕ ಶಿಬಿರ ನಡೆಯಲಿದೆ. ಸುಳ್ಯದಲ್ಲಿ 2018ರಲ್ಲಿ ಆರಂಭಗೊಂಡ ರಂಗಮಯೂರಿ ಕಲಾಶಾಲೆ. ಕಲಾಶಿಕ್ಷಣದ ಜೊತೆಗೆ ಬೇಸಿಗೆ ರಜಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ಮತ್ತಷ್ಟು ಕ್ರಿಯಾತ್ಮಕವಾಗಿ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಾ ಬಂದಿದೆ.ದೇಸೀ ಆಟಗಳು, ಜಾನಪದ ಹಾಡುಗಳು, ದೇಸೀ ವಸ್ತುಗಳ ತಯಾರಿಕೆ, ಪ್ರಾತ್ಯಕ್ಷಿಕೆ ಕಲಿಸುವುದರ ಜೊತೆಗೆ ಮಕ್ಕಳಿಗೆ ರಂಗ ತರಬೇತಿ, ನಾಟಕ ರಚನೆ-ನಿರ್ಮಾಣ, ಜನಪದ ಹಾಡು, ನೃತ್ಯ ಕಲಿಸಲಾಗುತ್ತದೆ. ದೇಶಭಕ್ತಿಯ ಗಾನ, ಸಂವಿಧಾನ ಪಠಣದ ಜೊತೆಗೆ ಇತರ ಚಟುವಟಿಕೆಗಳು ಇರಲಿದೆ. ಒಟ್ಟಿನಲ್ಲಿ ಪ್ರತಿ ಕ್ಷಣವೂ ಕಲಿಕೆ, ಪ್ರತಿ ಗಳಿಗೆಯೂ ಖುಷಿಯ ನಗು ಹಂಚುವ ಮಕ್ಕಳ ಕನಸಿನ ಬಣ್ಣದ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ. ಮಕ್ಕಳ ರಜೆಯ ಮಜಾಕ್ಕೆ ಖುಷಿಯ ನಗುವಿಗೆ ಕ್ಷಣಗಣನೆ ಶುರುವಾಗಿದೆ. ಬೆಳಿಗ್ಗೆ 8.45ರಿಂದ ಸಂಜೆ 5 ಗಂಟೆಯ ತನಕ ಶಿಬಿರ ನಡೆಯಲಿದೆ.

7 ರಿಂದ 17 ವರ್ಷದವರೆಗಿನ ಮಕ್ಕಳಿಗೆ ಭಾಗವಹಿಸಲು ಅವಕಾಶ ಇದೆ.
ಮತ್ತೆ ತಡವೇಕೆ..? ಆಸಕ್ತ ವಿದ್ಯಾರ್ಥಿಗಳು ಈ ಕೆಳಗಿನ ಸಂಖ್ಯೆ 9611355496 ಸಂಪರ್ಕಿಸಿ ಅಥವಾ ಪೋಸ್ಟರ್ನಲ್ಲಿ ನಮುದಿಸಿದ ಸಂಖ್ಯೆಗಳನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು ಎಂದು ರಂಗಮಯೂರಿ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ತಿಳಿಸಿದ್ದಾರೆ.