ಬನಾರಿ:ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಯಕ್ಷಗಾನ ಸಾಂಸ್ಕೃತಿಕ ಕಲೋತ್ಸವವು ನಡೆಯಿತು. ಸ್ಥಳ ಸಾನ್ನಿಧ್ಯ ಶ್ರೀ ಗೋಪಾಲಕೃಷ್ಣ ದೇವರ ಅರ್ಚನೆಯೊಂದಿಗೆ ಕಾವು ಶ್ರೀ ವಾಗ್ದೇವಿ ಭಜನಾ ಮಂಡಳಿ ಮತ್ತು ಬನಾರಿ ಭಜನಾ ತಂಡದ ಸಹಯೋಗದಲ್ಲಿ
ಭಜನಾ ಸೇವೆಯು ಮೂಡಿಬಂತು.
ಬಳಿಕ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ ಮಂಜೆಶ್ವರ ಅವರ ಅಧ್ಯಕ್ಷತೆಯಲ್ಲಿ ದಿ.ಕೀರಿಕ್ಕಾಡು ವನಮಾಲ ಕೇಶವ ಭಟ್ಟರ ಸಂಸ್ಮರಣೆ ಮತ್ತು ಸಂಘದ ಮೂವರು ಹಿರಿಯ ಕಲಾ ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು. ಯಕ್ಷಗಾನ ನಾಟ್ಯ ಗುರುಗಳಾದ ದಿವಾಣ ಶಿವಶಂಕರ ಭಟ್ಟರು ಸಂಸ್ಮರಣಾ ಭಾಷಣ ಮಾಡಿದರು , ಪ್ರಸಿದ್ಧ ಅರ್ಥಧಾರಿ ವೆಂಕಟರಾಮ ಭಟ್ಟ ಸುಳ್ಯ ಅವರು

ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಬೆಳ್ಳಿಪ್ಪಾಡಿ ಸದಾಶಿವ ರೈ , ಅಪ್ಪಯ್ಯ ಮಣಿಯಾಣಿ ಮಂಡೆಕ್ಕೋಲು, ರಾಧಾಕೃಷ್ಣ ರೈ ಮುದಿಯಾರು ಅವರನ್ಬು ಸನ್ಮಾನಿಸಲಾಯಿತು. ವಿಶ್ವ ವಿನೋದ ಬನಾರಿ, ಎಂ ರಮಾನಂದ ರೈ, ಕಲ್ಲಡ್ಕ ಗುತ್ತು ರಾಮಯ್ಯ ರೈ ಅವರು ಅಭಿನಂದನಾ ಪತ್ರ ವಾಚಿಸಿದರು. ಸಭೆಯನ್ನು ಉದ್ದೇಶಿಸಿ ಮಾತಾಡಿದ ಡಾ. ಬನಾರಿಯವರು ಸಂಘದ ಸಮಗ್ರ ಸಾಧನೆಯ ಬಗ್ಗೆ ಬೆಳಕು ಚೆಲ್ಲಿದರು.ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಪ್ರಾರ್ಥಿಸಿದರು. ನಿವೃತ್ತ ಪ್ರಾಧ್ಯಾಪಕ ಡಿ. ರಾಮಣ್ಣ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ದೇಲಂಪಾಡಿ ವಂದಿಸಿದರು.
ರಾತ್ರಿ “ಶ್ರೀ ಕೃಷ್ಣ ಜನನ – ಕಂಸ ವಧೆ ” ಯಕ್ಷಗಾನ ತಾಳಮದ್ದಳೆ ನಡೆಯಿತು ಭಾಗವತರಾಗಿ ರಚನಾ ಚಿದ್ಗಲ್, ಸ್ಕಂದ ದಿವಾಣ , ಕಲ್ಲಡ್ಕ ಶಿವರಾಮ ಕಲ್ಲೂರಾಯ, ವಿಷ್ಣುಶರಣಬನಾರಿ , ನಾರಾಯಣ ಪಾಟಾಳಿ ಮಯ್ಯಾಳ, ಕೃಷ್ಣ ಪ್ರಸಾದ ಬೆಳ್ಳಿಪ್ಪಾಡಿ ಅವರ ಚೆಂಡೆ ಮದ್ದಳೆ ವಾದನದಲ್ಲಿ ಸಹಕಾರದಲ್ಲಿ ಸಂಘದ ಮತ್ತು ಅತಿಥಿ ಅರ್ಥಧಾರಿಗಳ ಕುಡುವಿಕೆಯಿಂದ ಮೂಡಿಬಂತು.ನಿವೃತ್ತ ಜಲ್ಲಾ ನ್ಯಾಯಾಧೀಶ ಮನಮೋಹನ ಬನಾರಿ, ಬಾಲಕೃಷ್ಣ ಗೌಡ ಮುದಿಯಾರು, ರಾಮನಾಯ್ಕ ದೇಲಂಪಾಡಿ, ಭಾಸ್ಕರ ಮಾಸ್ತರ್ ಅಡ್ಯನಡ್ಕ, ನಂದ ಕಿಶೋರ ಬನಾರಿ, ಗೋಪಾಲಕೃಷ್ಣ ರೈ ಮುದಿಯಾರು, ಕಲ್ಲಡ್ಕ ಗುತ್ತು ಸೀತಾರಾಮ ರೈ ,ಪಂಚಾಯತ್ ಸದಸ್ಯೆ ನಳಿನಾಕ್ಷಿ, ಕುಸುಮ ವೀರಪ್ಪ ನಡುಬೈಲು ಮತ್ತಿತರರು ಭಾಗವಹಿಸಿದ್ದರು.