ಮಂಡೆಕೋಲು: ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗು ಗ್ರಾಮ ಗೌಡ ಸಮಿತಿ ಮಂಡೆಕೋಲು ಇದರ ಆಶ್ರಯದಲ್ಲಿ ಡಿ. 1ರಂದು ನಡೆಯುವ ಅರೆಭಾಷೆ ಗಡಿನಾಡ ಉತ್ಸವದ ಆಮಂತ್ರಣ ಪತ್ರವನ್ನು ನಿವೃತ್ತ ರೈಲ್ವೇ ಅಧಿಕಾರಿ ಡಿ.ವಿ. ಸುರೇಶ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಸಭೆಯ ಅದ್ಯಕ್ಷತೆಯನ್ನು ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ವಹಿಸಿದ್ದರು. ವೇದಿಕೆಯಲ್ಲಿ
ಅರೆಭಾಷೆ ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಪೇರಾಲು, ಲೋಕೆಶ್ ಊರುಬೈಲ್ , ತಾಲೂಕು ಗೌಡ ಮಹಿಳಾ ಘಟಕ ದ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಹರಿಶ್ಚಂದ್ರ ಪಾತಿಕಲ್ಲು, ಉಪಸ್ಥಿತರಿದ್ದರು. ಕಾರ್ಯಕ್ರಮದ ರೂಪು ರೇಷೆಗಳನ್ನು ಕಾರ್ಯಕ್ರಮ ಸಂಚಾಲಕರಾದ ಡಾ. ಜ್ಞಾನೇಶ್ ಎನ್.ಎ.ವಿವರಿಸಿದರು. ಗೌಡ ಸಮಿತಿ ಕಾರ್ಯದರ್ಶಿ ದಾಮೋದರ ಮಿತ್ತಪೇರಾಲು ಸ್ವಾಗತಿಸಿ ಗ್ರಾಮ ಮಹಿಳಾ ಘಟಕ ಅದ್ಯಕ್ಷೆ ದಿವ್ಯಲತಾ ಚೌಟಾಜೆ ವಂದಿಸಿದರು.
ಕಾರ್ಯಕ್ರಮದಲ್ಲಿ ನಾಗೇಶ್ ದೇವರಗುಂಡ, ಜನಾರ್ಧನ ಬರೆಮೇಲು, ಮೇದಪ್ಪ ಗೌಡ ಬೊಳುಗಲ್ಲು, ಜಯಪ್ರಕಾಶ್ ಕುಕ್ಕೆಟ್ಟಿ, ಶುಭಕರ ಬೊಳುಗಲ್ಲು ಲಕ್ಷ್ಮಣ ಉಗ್ರಾಣಿಮನೆ, ಆನಂದ ಬದಿಕಾನ, ದಾಮೊದರ ಪಾತಿಕಲ್ಲು, ಹರೀಶ್ ಕಲ್ಲಡ್ಕ ಪುರುಷೋತ್ತಮ, ಮಧುರ ಎಂ.ಆರ್, ವಸಂತಿ ಬೊಳುಗಲ್ಲು, ಭಾರತಿ ಉಗ್ರಾಣಿಮನೆ, ದೀಪಿಕಾ ಅತ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.