ಸುಳ್ಯ:ಒಂದು ಕಾಲದಲ್ಲಿ ಮನುಷ್ಯನಿಗೆ ಸರಿಯಾಗಿ ಅನ್ನ ಕೂಡ ಇಲ್ಲದ ಸ್ಥಿತಿ ಇತ್ತು. ಆದರೆ ಇಂದು ಕಾಲ ಬದಲಾಗಿದೆ. ಮನುಷ್ಯರ ಬದುಕಿನಲ್ಲಿ ಹಣ, ಸಂಪತ್ತು ಹರಿದು ಬರುತ್ತದೆ. ಆ ಸಂಪತ್ತು ಕೂಡಿಟ್ಟು ಏನೂ ಪ್ರಯೋಜನ ಇಲ್ಲ. ಆ ಸಂಪತ್ತು, ಜನರಿಗೆ, ಸಮಾಜಕ್ಕೆ ಉಪಯೋಗ ಆಗಬೇಕು ಆಗ ಅದಕ್ಕೆ ಮೌಲ್ಯ ಜಾಸ್ತಿ. ಸಮಾಜಕ್ಕೆ, ಜನರಿಗೆ ಉಪಯೋಗ ಇಲ್ಲದ ಸಂಪತ್ತು ವ್ಯರ್ಥ ಎಂದು ಕ್ಯಾಲಿಕಟ್ನ ಜಾಮಿಅ ಮರ್ಕಝ್ನ ವೈಸ್ ಚಾನ್ಸಲರ್ ಡಾ.ಅಡ್ವಕೇಟ್ ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಹೇಳಿದ್ದಾರೆ.
ಸುಳ್ಯದ ಜಟ್ಟಿಪಳ್ಳದ ನಾವೂರು ರಸ್ತೆಯ ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ ಸಮೀಪ ನೂತನವಾಗಿ ನಿರ್ಮಾಣವಾದ
‘ಗಲ್ಫ್ ಅಡಿಟೋರಿಯಂ’ ಲೋಕಾರ್ಪಣೆ ಹಾಗು ವಿವಿಧ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಭಾಷಣ ಮಾಡಿದರು. ದುಗ್ಗಲಡ್ಕ ಬುಖಾರಿಯಾ ಅರೇಬಿಕ್ ಕಾಲೇಜಿನ ಪ್ರಾಂಶುಪಾಲರಾದ ಅಸ್ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು. ಪ್ರಾರ್ಥನಾ ಸಂಗಮದ ನೇತೃತ್ವವನ್ನು ಕ್ಯಾಲಿಕಟ್ ಜಾಮಿಯಾ ಮರ್ಕಝ್ನ ಉಪಾಧ್ಯಕ್ಷರಾದ ಸಯ್ಯಿದ್ ಶಿಹಾಬುದ್ದೀನ್ ಅಲ್ ಅಹ್ದಲ್ ತಂಙಳ್ ಮುತ್ತನೂರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷರಾದ ನಿಸಾರ್ ಅಹಮ್ಮದ್, ಮುಖಂಡರಾದ ಡಾ.ಹಾಜಿ ಯು.ಕೆ.ಮೋನು ಕಣಚೂರು, ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ಜಿ.ಎ.ಬಾವಾ, ಹಾಜಿ ಇಸ್ಮಾಯಿಲ್ ಕೀನ್ಯ, ಎಂ.ಎಸ್.ಮಹಮ್ಮದ್, ಟಿ.ಎಂ.ಶಹೀದ್ ತೆಕ್ಕಿಲ್, ಅಬ್ದುಲ್ ರಹಿಮಾನ್ ಸಂಕೇಶ್, ಡಾ.ಉಮ್ಮರ್ ಬೀಜದಕಟ್ಟೆ, ಆದಂ ಹಾಜಿ ಕಮ್ಮಾಡಿ, ನೂರುದ್ದೀನ್ ಸಾಲ್ಮರ,
ಅನ್ಸಾರಿಯಾ ಗಲ್ಫ್ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಸಲೀಂ ಇಸ್ಮಾಯಿಲ್, ಉಪಾಧ್ಯಕ್ಷ ಮುನೀರ್ ಜಟ್ಟಿಪಳ್ಳ, ಕೋಶಾಧಿಕಾರಿ ಎಸ್.ಎಂ.ಅಬ್ದುಲ್ ಹಮೀದ್, ಸಿದ್ದಿಕ್ ಬಹರೈನ್, ಅಬ್ದುಲ್ ಖಾದರ್ ಪಟೇಲ್,ಗಾಂಧಿನಗರ ಕೇಂದ್ರ ಜುಮಾ ಮಸ್ಜಿದ್ ಅಧ್ಯಕ್ಷ ಕೆ.ಎಂ.ಮಹಮ್ಮದ್, ಅಬ್ದುಲ್ಲಾ ಕಟ್ಟೆಕ್ಕಾರ್ಸ್, ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ, ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಅನ್ಸಾರಿಯಾ ಕಾರ್ಯದರ್ಶಿಗಳಾದ ಎ.ಬಿ.ಅಬ್ದುಲ್ ಕಲಾಂ, ಶರೀಫ್ ಜಟ್ಟಿಪಳ್ಳ,ಸಲಹಾ ಸಮಿತಿ ಸದಸ್ಯರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ, ಇಕ್ಬಾಲ್ ಕನಕಮಜಲು, ಮುನೀರ್ ಜಟ್ಟಿಪಳ್ಳ, ಶಾಫಿ ಕುತ್ತಮೊಟ್ಟೆ, ನ.ಪಂ. ಸದಸ್ಯರುಗಳಾದ ಉಮ್ಮರ್ ಕೆ ಎಸ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ಸದಸ್ಯ ಸಿದ್ದಿಕ್ ಕೊಕ್ಕೊ, ಮತ್ತಿತರರು ಉಪಸ್ಥಿತರಿದ್ದರು.ಮೀಫ್ ಉಪಾಧ್ಯಕ್ಷ ಕೆ.ಎಂ.ಮುಸ್ತಫ ಸ್ವಾಗತಿಸಿದರು.