ಸುಳ್ಯ:ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ, ಸುಳ್ಯ ನಗರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ, ಬೃಹತ್ ಪಂಜಿನ ಮೆರವಣಿಗೆ ಸುಳ್ಯದಲ್ಲಿ ನಡೆಯಿತು.ಸುಳ್ಯ ನಗರದ ಜ್ಯೋತಿ ವೃತ್ತದಿಂದ ಆರಂಭಗೊಂಡ ಪಂಜಿನ ಮೆರವಣಿಗೆಗೆ ಕಲ್ಕುಡ ದೈವಸ್ಥಾನದ ಆಡಳಿತ ಧರ್ಮದರ್ಶಿ ಪಿ.ಕೆ.ಉಮೇಶ್ ಚಾಲನೆ ನೀಡಿದರು.ಪಂಜಿನ ಮೆರವಣಿಗೆ
ಜ್ಯೋತಿ ವೃತ್ತದಿಂದ ಗಾಂಧಿನಗರ ತನಕ ಸಾಗಿ ಚೆನ್ನಕೇಶವ ದೇವಸ್ಥಾನದ ಬಳಿಯಲ್ಲಿ ಸಮಾಪನಗೊಂಡಿತು.
ಬಳಿಕ ನಡೆದ ಅಖಂಡ ಭಾರತ ಸಂಕಲ್ಪ ದಿನಾಚರಣೆಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಮುರಳೀಕೃಷ್ಣ ಹಸಂತಡ್ಕ ದಿಕ್ಸೂಚಿ ಭಾಷಣ ಮಾಡಿದರು.’ಭಾರತ ಇಂದು ಬದಲಾಗುತಿದೆ,ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ವಿಶ್ವಗುರುವಾಗುವತ್ತ ದೇಶ ಮುನ್ನುಗ್ಗಿದೆ ಎಂದು ಅವರು ಹೇಳಿದರು. ಬ್ರಿಟೀಷರ ಆಳ್ವಿಕೆಯಲ್ಲಿ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಕಪಿಮುಷ್ಠಿಯಲ್ಲಿ ಸಿಲುಕಿ ನಲುಗಿದರೂ ಭಾರತ ಮತ್ತೆ ತನ್ನ

ಪರಮ ವೈಭವವನ್ನು ಮರಳಿ ಪಡೆಯುತ್ತಿದೆ. ಭಾರತ ವಿಶ್ವಗುರುವಾಗುವ ಇಂದಿನ ದಿನಗಳಲ್ಲಿ ದೇಶ ಭಕ್ತಿ ಮತ್ತು ರಾಷ್ಟ್ರೀಯತೆ ಪ್ರತಿಯೊಬ್ಬರ ಸಂಕಲ್ಪವಾಗಬೇಕು ಎಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಭೂಸೇನೆಯ ನಿವೃತ್ತ ಯೋಧ ಗುರುಪ್ರಸಾದ್ ರೈ ಪೇರಾಲುಗುತ್ತು ಅವರನ್ನು ಸನ್ಮಾನಿಸಲಾಯಿತು.ವಿಶ್ವ ಹಿಂದೂ ಪರಿಷತ್ ಸುಳ್ಯ ನಗರದ ಅಧ್ಯಕ್ಷ ಉಪೇಂದ್ರ ನಾಯಕ್, ಭಜರಂಗದಳ ನಗರ ಸಂಯೋಜಕ ರಾಜೇಶ್ ಕಲ್ಲುಮುಟ್ಲು, ಜಿಲ್ಲಾ ಸಪ್ತಾಹಿಕ ಪ್ರಮುಖ್ ರೂಪೇಶ್ ಪೂಜಾರಿಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಭಜರಂಗದಳ ನಗರ

ಸಂಯೋಜಕ ರಾಜೇಶ್ ಕಲ್ಲುಮುಟ್ಲು ಸ್ವಾಗತಿಸಿದರು,ವಿಶ್ವ ಹಿಂದೂ ಪರಿಷತ್ ತಾಲೂಕು ಕಾರ್ಯದರ್ಶಿ
ನವೀನ್ ಎಲಿಮಲೆ ಅಖಂಡ ಭಾರತ ಸಂಕಲ್ಪ ದಿನದ ಪ್ರತಿಜ್ಞೆ ಬೋಧಿಸಿದರು. ಬಜರಂಗದಳ ತಾಲೂಕು ಸಹಸಂಯೋಜಕ ವರ್ಷಿತ್ ಚೊಕ್ಕಾಡಿ ವಂದಿಸಿದರು. ಶುಭ ಪ್ರಾರ್ಥಿಸಿದರು. ಗಿರೀಶ್ ಕುಂಠಿನಿ ಕಾರ್ಯಕ್ರಮ ನಿರೂಪಿಸಿದರು.
ಬಜರಂಗದಳ ತಾಲೂಕು ಸಂಯೋಜಕ ಹರಿಪ್ರಸಾದ್ ಎಲಿಮಲೆ, ಪ್ರಮುಖರಾದ ಹರೀಶ್ ಕಂಜಿಪಿಲಿ, ಶಶಿಕಲಾ ನೀರಬಿದಿರೆ, ಸುನಿಲ್ ಕೇರ್ಪಳ, ಸುದರ್ಶನ ಸೂರ್ತಿಲ, ಚಿದಾನಂದ ಗುಂಡ್ಯಡ್ಕ, ಲತೀಶ್ ಗುಂಡ್ಯ, ಗಿರೀಶ್ ಕಲ್ಲುಗದ್ದೆ, ನಾರಾಯಣ ಎಸ್.ಎಂ, ಮತ್ತಿತರರು ಉಪಸ್ಥಿತರಿದ್ದರು.







































