ಸುಳ್ಯ: ಸುಳ್ಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ (ಸಿಎಬ್ಯಾಂಕ್) ಅಜ್ಜಾವರ ಶಾಖೆಯ ನವೀಕೃತ ಬ್ಯಾಂಕಿಂಗ್ ಕಚೇರಿ ಉದ್ಘಾಟನೆ ಮತ್ತು
ನೂತನ ಸಭಾಭವನ ಲೋಕಾರ್ಪಣೆ ಕಾರ್ಯಕ್ರಮ ನಾಳೆ(ಜೂ.20) ಪೂರ್ವಾಹ್ನ 10-30ಕ್ಕೆ ಅಜ್ಜಾವರ ಶಾಖಾ ಕಛೇರಿ ಆವರಣದಲ್ಲಿ
ನಡೆಯಲಿದೆ.ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ
ಡಾ ಎಂ. ಎನ್ ರಾಜೇಂದ್ರಕುಮಾರ್ ಲೋಕಾರ್ಪಣೆ ನೆರವೇರಿಸುವರು. ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ
ವಿಕ್ರಮ್ ಎ. ವಿ. ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಶಾಸಕಿ ಭಾಗೀರಥಿ ಮುರುಳ್ಯ,ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರು ಹಾಗು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೋಟ್ಟು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ
ಎಸ್. ಎನ್ ಮನ್ಮಥ,ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಹೆಚ್. ಎನ್., ಸಹಕಾರ ಸಂಘಗಳ ಪುತ್ತೂರು ಉಪವಿಭಾಗದ ಸಹಾಯಕ ನಿಬಂಧಕರಾದ ರಘು ಎಸ್. ಎಂ, ಸುಳ್ಯ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ. ಭಾಗವಹಿಸಲಿದ್ದಾರೆ ಎಂದು
ಸುಳ್ಯ ಸಿಎ ಬ್ಯಾಂಕ್ನ ಅಧ್ಯಕ್ಷ ವಿಕ್ರಮ್ ಎ. ವಿ. ಹಾಗು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಎಸ್. ಪಿ. ತಿಳಿಸಿದ್ದಾರೆ.







