ಆಡಿಂಜ:ಆಲೆಟ್ಟಿ ಗ್ರಾಮದ ಬಡ್ಡಡ್ಕ ಎಂಬಲ್ಲಿಯ ಕೂರ್ನಡ್ಕದ ಆಡಿಂಜ ಎಂಬಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು. 2024-25 ನೆ ಸಾಲಿನಲ್ಲಿ ಉಂಟಾದ ಅತಿವೃಷ್ಟಿ ಹಾಗೂ ನೆರೆ ಹಾವಳಿ ಯಿಂದ ಹಾನಿಗೊಳಗಾದ ಸೇತುವೆಗಳ ತುರ್ತು ದುರಸ್ತಿಗಾಗಿ ಲೆಕ್ಕ ಶೀರ್ಷಿಕೆ 3034-04-105-0-01-200 ಜಿಲ್ಲಾ ಮತ್ತು ಇತರೆ ರಸ್ತೆ ಸೇತುವೆಗಳು – ನಿರ್ವಹಣೆಯಡಿ 25,00,000 ಅನುದಾನ ಬಿಡುಗಡೆಗೊಂಡಿದೆ. ಕಾಂಗ್ರೆಸ್ ಮುಖಂಡರು ಹಾಗೂ
ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ತೇಜಕುಮಾರ್ ಬಡ್ಡಡ್ಕ ಹಾಗೂ ಮಾಜಿ ಜಿಲ್ಲಾ ಪರಿಷತ್ ಸದಸ್ಯರಾದ ದೇವಪ್ಪ ನಾಯ್ಕ ಬಡ್ಡಡ್ಕ ಇವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ

ಗ್ರಾಮ ಪಂಚಾಯತ್ ಸದಸ್ಯರಾದ ಸತ್ಯಕುಮಾರ್ ಆಡಿಂಜ, ಧರ್ಮಪಾಲ ಕೊಯಿಂಗಾಜೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಯೂಸೂಫ್ ಅಂಜಿಕ್ಕಾರು, ಬ್ಲಾಕ್ ಕಾಂಗ್ರೆಸ್ ನಾಯಕರಾದ ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ, ಅಲೆಟ್ಟಿ ಗ್ರಾಮ ಕಾಂಗ್ರೆಸ್ ನಾಯಕರಾದ ಕೇಶವ ಮೊರಂಗಲ್ಲು, ಗೋಪಾಲ ಗುಂಡ್ಯ, ನಾರಾಯಣ ರೈ ಆರಂಬೂರು, ರಾಮಕೃಷ್ಣ ಬಡ್ಡಡ್ಕ, ದಯಾನಂದ ತಲೆಪಲ್ಲ, ರಾಮಚಂದ್ರ ಪಾವಳಿಕಜೆ, ಚೇತನ್ ಪತ್ತುಕುಂಜ, ರಜನೀಶ್ ಹೊನ್ನೇಡಿ, ಮೀನಾಕ್ಷಿ ಆರಂಬೂರು, ಸರೋಜಿನಿ ಕಾಪುಮಲೆ, ರಾಜ್ ಕುಮಾರ್ ನಾಗಪಟ್ಟಣ, ಊರವರಾದ ವಿವೇಕಾನಂದ ಕೂರ್ನಡ್ಕ, ಸುಬ್ರಾಯ ಗೌಡ ಅಡಿಂಜ ಮೊದಲಾದವರು ಉಪಸ್ಥಿತರಿದ್ದರು.