ಸುಳ್ಯ: ಆಮ್ ಆದ್ಮಿ ಪಾರ್ಟಿಯ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳನ್ನು ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಸುಳ್ಯ ಪಂಜದವರಾದ ಡಾ.ವಿಶುಕುಮಾರ್ ನೇಮಕಗೊಂಡಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸುಳ್ಯದವರಾದ ಖಲಂದರ್ ಎಲಿಮಲೆ ನೇಮಕಗೊಂಡಿದ್ದಾರೆ. ಸುಳ್ಯ ಗುತ್ತಿಗಾರಿನವರಾದ ವೇಣುಗೋಪಾಲ ಪುಚ್ಚಪ್ಪಾಡಿ ರಾಜ್ಯ ಜಂಟಿ ಕಾರ್ಯದರ್ಶಿಯಾಗಿದ್ದಾರೆ.
ಜಿಲ್ಲಾ ಸಮಿತಿಗಳ ಅವಧಿ ಮುಗಿದ ಹಿನ್ನಲೆಯಲ್ಲಿ ನೂತನ
ಡಾ.ವಿಶುಕುಮಾರ್ ,ಖಲಂದರ್ ಎಲಿಮಲೆ , ವೇಣುಗೋಪಾಲ ಪುಚ್ಚಪ್ಪಾಡಿ
ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಸುಳ್ಯದವರಾದ ಅಶೋಕ್ ಎಡಮಲೆ ದ.ಕ.ಜಿಲ್ಲಾಧ್ಯಕ್ಷರಾಗಿದ್ದರು. ಅಶೋಕ್ ಎಡಮಲೆ ಪ್ರಸ್ತುತ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯರಾಗಿದ್ದಾರೆ.
ನೂತನ ಅಧ್ಯಕ್ಷ ವಿಶುಕುಮಾರ್ ಕೃಷಿ ವಿಜ್ಞಾನಿಯಾಗಿದ್ದಾರೆ. ಖಲಂದರ್ ಎಲಿಮಲೆ ಸಿವಿಲ್ ಇಂಜಿನಿಯರ್ ಆಗಿದ್ದಾರೆ. ವೇಣುಗೋಪಾಲ್ ಪುಚ್ಚಪ್ಪಾಡಿ ಬ್ರೆವರಾ ಟೆಕ್ನಾಲಜಿ ಸಿಇಒ ಆಗಿದ್ದಾರೆ.
ದ.ಕ.ಜಿಲ್ಲಾ ಮಾಜಿ ಅಧ್ಯಕ ಸಂತೋಷ್ ಕಾಮತ್ ರಾಜ್ಯ ಜಂಟಿ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾಗಿದ್ದಾರೆ.
ದ.ಕ.ಜಿಲ್ಲಾ ಸಮಿತಿಯ ಸಂಘಟನಾ ಕಾರ್ಯದರ್ಶಿಗಳಾಗಿ ಶಾನನ್ ಪಿಂಟೋ, ಸದಾಶಿವ ರಾವ್, ಜನಾರ್ಧನ ಬಂಗೇರ, ಮಹಿಳಾ ಘಟಕದ ಅಧ್ಯಕ್ಷರಾಗಿ ವಿದ್ಯಾ ರಾಕೇಶ್ ಯುವ ಘಟಕದ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ನೇಮಕಗೊಂಡಿದ್ದಾರೆ. ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ನೂತನ ಪದಾಧಿಕಾರಿಗಳ ಘೋಷಣೆ ಮಾಡಿದ್ದಾರೆ.