ಪಲ್ಲೆಕೆಲೆ: ಏಷ್ಯಾ ಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ನೇಪಾಳ ವಿರುದ್ಧ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಒಟ್ಟು 3 ಅಂಕ ಗಳಿಸಿದ ಭಾರತವು ಸೂಪರ್-4 ಹಂತಕ್ಕೆ ಅರ್ಹತೆ ಪಡೆದಿದೆ.ಆರಂಭಿಕ ಬ್ಯಾಟರ್ಗಳಾದ ರೋಹಿತ್ ಶರ್ಮಾ(ಔಟಾಗದೆ 74 ರನ್, 59 ಎಸೆತ, 6 ಬೌಂಡರಿ, 5 ಸಿಕ್ಸರ್ )ಹಾಗೂ
ಶುಭಮನ್ ಗಿಲ್(ಔಟಾಗದೆ 67 ರನ್, 62 ಎಸೆತ, 8 ಬೌಂಡರಿ, 1 ಸಿಕ್ಸರ್) ಅರ್ಧಶತಕದ ಕೊಡುಗೆ ನೆರವಿನಿಂದ ಸುಲಭ ಜಯ ದಾಖಲಿಸಿತು. ಭಾರತ ಗೆಲ್ಲಲು 231 ರನ್ ಗುರಿ ಬೆನ್ನಟ್ಟುತ್ತಿರುವಾಗಲೇ ಮಳೆ ಸುರಿಯಲಾರಂಭಿಸಿತು. ಈ ವೇಳೆ ಭಾರತವು 2.1 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 17 ರನ್ ಗಳಿಸಿತು. ಪಂದ್ಯ ಮತ್ತೆ ಆರಂಭವಾದಾಗ ಭಾರತಕ್ಕೆ 23 ಓವರ್ಗಳಲ್ಲಿ 145 ಪರಿಷ್ಕೃತ ಗುರಿ ನೀಡಲಾಯಿತು. ಭಾರತವು 20.1 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 147 ರನ್ ಗಳಿಸಿತು. ಆರಂಭಿಕ ಬ್ಯಾಟರ್ಗಳಾದ ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಮೊದಲ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 147 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ ತಂಡ ಆರಂಭಿಕ ಬ್ಯಾಟರ್ ಆಸಿಫ್ ಶೇಕ್(58 ರನ್, 97 ಎಸೆತ) ಹಾಗೂ ಕೆಳ ಕ್ರಮಾಂಕದ ಸೋಂಪಲ್ ಕಮಿ(48 ರನ್, 56 ಎಸೆತ) ನೆರವಿನಿಂದ 48.2 ಓವರ್ಗಳಲ್ಲಿ 230 ರನ್ ಗಳಿಸಿ ಆಲೌಟಾಯಿತು. ಭಾರತದ ಬೌಲಿಂಗ್ನಲ್ಲಿ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ(3-40) ಹಾಗೂ ಮುಹಮ್ಮದ್ ಸಿರಾಜ್(3-61)ತಲಾ 3 ವಿಕೆಟ್ಗಳನ್ನು ಪಡೆದರು.