ಮಂಗಳೂರು:ದಕ್ಷಿಣ ಕನ್ನಡದ ಪ್ರಮುಖ ಪ್ರವಾಸಿ ತಾಣಗಳ ಪೈಕಿ ಒಂದಾಗಿರುವ ಸೋಮೇಶ್ವರದ ಕಡಲಕಿನಾರೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದಲ್ಲಿ “ಯೋಗ ವಿತ್ ಯೋಧ” ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕ್ಯಾಪ್ಟನ್ ಚೌಟ ಸೋಮೇಶ್ವರವನ್ನು ಆಧ್ಯಾತ್ಮಿಕ ಮತ್ತು

ಸಾಂಸ್ಕೃತಿಕ ತಾಣವಾಗಿ ಅಭಿವೃದ್ಧಿಪಡಿಸುವ ಮೂಲಕ, ಅದರ ನೈಜ ಸ್ವರೂಪಕ್ಕೆ ಧಕ್ಕೆಯಾಗದಂತೆ ‘ವಿಕಾಸ ಭಿ, ವಿರಾಸತ್ ಭಿ’ ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಿರೀಕ್ಷೆಯನ್ನು ಸಾಕಾರಗೊಳಿಸಬೇಕೆಂದು ಕ್ಯಾ. ಚೌಟ ಕರೆ ನೀಡಿದ್ದಾರೆ.
ಕಾರ್ಯಕ್ರಮದ ಕೊನೆಯಲ್ಲಿ, ಕರಾವಳಿಯ ಪ್ರವಾಸೋದ್ಯಮದ ತಾಣ ಹಾಗೂ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವುದರೊಂದಿಗೆ, ಸಾಧ್ಯತೆಗಳ ಸಾಗರವಾಗಿರುವ ದಕ್ಷಿಣ ಕನ್ನಡವನ್ನು ಅಭಿವೃದ್ದಿಯ ಪಥದೆಡೆಗೆ ಬದಲಾಯಿಸುವ ಮಹತ್ವದ ಸಂಕಲ್ಪವನ್ನು ಕೈಗೊಳ್ಳಲಾಯಿತು. ಯೋಗಾಭ್ಯಾಸವನ್ನು ಯೋಗ ತರಬೇತುದಾರರಾದ ಸಂಧ್ಯಾ ರೈ ನಡೆಸಿಕೊಟ್ಟಿದ್ದು, ಅರುಣ್ ಉಳ್ಳಾಲ ಯೋಗ ಮಂತ್ರ ಪಠಿಸಿದರು. ಆರ್. ಜೆ ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು.














