ಬೆಂಗಳೂರು: ಜುಲೈ 15ರಿಂದ 26ವರೆಗೂ 16ನೇ ವಿಧಾನ ಸಭೆಯ ನಾಲ್ಕನೇ ಅಧಿವೇಶನ ನಡೆಯಲಿದೆ. ಒಟ್ಟು ಒಂಬತ್ತು ದಿನಗಳ ಕಾಲ ಮುಂಗಾರು ಅಧಿವೇಶನ ನಡೆಯಲಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ
ಅವರು, ವಿಧಾನ ಸಭೆಯ ಹಿಂಬಾಗಿಲು ಬದಲಿಸುವ ಕೆಲಸ ಮಾಡಿದ್ದೇವೆ. ವಿಧಾನ ಸೌಧದ ಸೌಂದರ್ಯ ಹೆಚ್ಚಿಸಲು ಪ್ಲ್ಯಾನ್ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು ಜುಲೈ 15ರಂದು ಮುಖ್ಯದ್ವಾರದ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು. ಸದಸ್ಯರ ಹಾಜರಾತಿ ದಾಖಲಾತಿಗೆ ವಿಶೇಷ ಮಾಡಲಾಗುವುದು. ಕಾರ್ಯ ದಕ್ಷತೆ ತೋರಿದವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಶೀಘ್ರದಲ್ಲೇ ಕೊಡುತ್ತೇವೆ ಎಂದು ತಿಳಿಸಿದರು.