ಸುಳ್ಯ:ಸಿಂಗಾಪುರದ ಟೆಸ್ಸೆನ್ ಸೋನ್ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಶಿಟೋರ್ಯ ಕರಾಟೆಡೊ ಚಾಂಪಿಯನ್ ಶಿಪ್ 2024 ರ 14-15 ವರ್ಷ ವಯಸ್ಸಿನ ಹುಡುಗರ ಕುಮಿಟೆ -70ಕೆಜಿ ವಿಭಾಗದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಿಯಾದ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಹತ್ತನೇ ತರಗತಿಯ ವರ್ಷಿತ್ ಎಮ್ ಎನ್ ಅವರನ್ನು ಶಾಲೆಯ ವತಿಯಿಂದ
ಸನ್ಮಾನಿಸಿ ಅಭಿನಂದಿಸಲಾಯಿತು.ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು ಜೆ, ಪ್ರಾಂಶುಪಾಲ ಅರುಣ್ ಕುಮಾರ್ ಮತ್ತು ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನಿತ್ತು ಗೌರವಿಸಿದರು.ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ , ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಅಭಿನಂದಿಸಿದರು.
ವರ್ಷಿತ್ ಮೀನಗದ್ದೆ ನಡುಮನೆ ವಸಂತ ಕುಮಾರ್ ಮತ್ತು ಜಯಶ್ರೀ ವಸಂತ್ ಅವರ ಪುತ್ರ. ಚಂದ್ರಶೇಖರ್ ಕನಕಮಜಲು ಇವರಿಗೆ ಮಾರ್ಗದರ್ಶನ ನೀಡಿರುತ್ತಾರೆ.