ಕಾಸರಗೋಡು: ವಂದೇ ಭಾರತ್ ಎಕ್ಸ್ ಪ್ರೆಸ್ ಇಂದು ಕಾಸರಗೋಡಿಗೆ ಆಗಮಿಸಿತು. ತಿರುವನಂತಪುರದಿಂದ ಹೊರಟ ವಂದೇ ಭಾರತ್ ಎಕ್ಸ್ಪ್ರೆಸ್ನ ಎರಡನೇ ಪ್ರಾಯೋಗಿಕ ಸಂಚಾರ 7 ಗಂಟೆ 50 ನಿಮಿಷದಲ್ಲಿ ಯಶಸ್ವಿಯಾಗಿ ಕಾಸರಗೋಡಿಗೆ ಬಂದು ತಲುಪಿದೆ.ಬೆಳಗ್ಗೆ 5.20ಕ್ಕೆ
ತಂಬಾನೂರು ರೈಲು ನಿಲ್ದಾಣದಿಂದ ಪ್ರಯಾಣ ಆರಂಭಿಸಿದ ರೈಲು ಮಧ್ಯಾಹ್ನ 1.10ಕ್ಕೆ ಕಾಸರಗೋಡು ರೈಲು ನಿಲ್ದಾಣ ತಲುಪಿತು.
ಕಾಸರಗೋಡು ನಿಲ್ದಾಣಕ್ಕೆ ಪ್ರಥಮ ಬಾರಿಗೆ ಆಗಮಿಸಿದ ವಂದೇಭಾರತ್ ರೈಲನ್ನು ಜನತೆ ವೀಕ್ಷಿಸಿ ಖುಷಿಪಟ್ಟರು. ಆತ್ಮೀಯವಾಗಿ ಸ್ವಾಗತಿಸಿದರು.
ಈ ಮೂದಲು ತಿರುವನಂತಪುರಂನಿಂದ ಕಣ್ಣೂರಿಗೆ ಇದ್ದ ವಂದೇಭಾರತ್ ಎಕ್ಸ್ ಪ್ರೆಸ್ ರೈಲಿನ ಪ್ರಯಾಣವನ್ನು ಭಾರೀ ಬೇಡಿಕೆಯ ಹಿನ್ನಲೆಯಲ್ಲಿ ಕಾಸರಗೋಡಿಗೆ ವಿಸ್ತರಿಸಲು ಕೇಂದ್ರ ಸರಕಾರ ನಿರ್ಧರಿಸಿತ್ತು. ಈ ಹಿನ್ನಲೆಯಲ್ಲಿ ಪ್ರಾಯೋಗಿಕ ಪ್ರಯಾಣವನ್ನು ಕಾಸರಗೋಡಿಗೆ ವಿಸ್ತರಿಸಲಾಗಿದೆ. ಏ.25ರಂದು ಪ್ರಧಾನಿ ಮೋದಿ ಅವರು ವಂದೇ ಭಾರತ್ ಎಕ್ಸ್ಪ್ರೆಸ್ನ ಅಧಿಕೃತ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ