ಕ್ವಾಲಾಲಂಪುರ: 19 ವರ್ಷದೊಳಗಿನವರ ಐಸಿಸಿ ಮಹಿಳಾ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಆರಂಭಿಕ ಆಟಗಾರ್ತಿ ತ್ರಿಷಾ ಗೊಂಗಡಿ ಶತಕದ ಸಾಧನೆ ಮಾಡಿದ್ದಾರೆ.ಕ್ವಾಲಾಲಂಪುರದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಸೂಪರ್ ಸಿಕ್ಸ್ ಒಂದನೇ ಗುಂಪಿನಲ್ಲಿ ಸ್ಕಾಟ್ಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ
ತ್ರಿಷಾ ಶತಕ ಭಾರಿಸಿದ್ದಾರೆ.ಆ ಮೂಲಕ ತ್ರಿಷಾ, ಐಸಿಸಿ ಮಹಿಳಾ ಅಂಡರ್-19 ವಿಶ್ವಕಪ್ ಇತಿಹಾಸದಲ್ಲೇ ಶತಕ ಗಳಿಸಿದ ಮೊದಲ ಬ್ಯಾಟರ್ ಎನಿಸಿದ್ದಾರೆ.ತ್ರಿಷಾ ಹಾಗೂ ಜಿ. ಕಮಲಿನಿ ಅಮೋಘ ಆಟದ ನೆರವಿನಿಂದ ಭಾರತ ತಂಡವು ನಿಗದಿತ 20 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 208 ರನ್ಗಳ ಬೃಹತ್ ಮೊತ್ತ ಪೇರಿಸಿತು.ತ್ರಿಷಾ ಹಾಗೂ ಕಮಲಿನಿ ಮೊದಲ ವಿಕೆಟ್ಗೆ 13.3 ಓವರ್ಗಳಲ್ಲಿ 147 ರನ್ಗಳ ಜೊತೆಯಾಟ ಕಟ್ಟಿದರು.ತ್ರಿಷಾ 59 ಎಸೆತಗಳಲ್ಲಿ 13 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 110 ರನ್ ಗಳಿಸಿ ಅಜೇಯರಾಗುಳಿದರು. ಮತ್ತೊಂದೆಡೆ ಕಮಲಿನಿ 42 ಎಸೆತಗಳಲ್ಲಿ ಒಂಬತ್ತು ಬೌಂಡರಿಗಳ ನೆರವಿನಿಂದ 51 ರನ್ ಗಳಿಸಿದರು.