ಸುಳ್ಯ:ರೋಟರಿ ಕ್ಲಬ್ ಸುಳ್ಯ ವತಿಯಿಂದ ಸ್ಥಳೀಯ ರೋಟರಿ ಕಮ್ಯೂನಿಟಿ ಹಾಲ್ನಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ‘ರಾಷ್ಟ್ರ ನಿರ್ಮಾಣ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ನಡೆಯಿತು.ಕೇರ್ಪಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ
ಶಿಕ್ಷಕಿ ಹೊನ್ನಮ್ಮ,ಸುಳ್ಯ ಕೆಪಿಎಸ್ ಶಾಲೆಯ ಶಿಕ್ಷಕಿ ಲತಾ ಮಹೇಶ್ ಶೆಣೈ, ರೋಟರಿ ಶಾಲೆಯ ಶಿಕ್ಷಕರಾದ ಪದ್ಮನಾಭ ಕೊಯನಾಡು, ಚಂದ್ರಕಲಾ ಡಿ, ಹರ್ಷಿತ್.ಜಿ.ಜೆ. ಅವರಿಗೆ ‘ರಾಷ್ಟ್ರ ನಿರ್ಮಾಣ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಸದ್ಭಾವನಾ

ಪ್ರಶಸ್ತಿ ಹಾಗು ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನೀಡುವ ‘ಆಚಾರ್ಯ ಪ್ರಶಸ್ತಿ’ ಪಡೆದ ಚಂದ್ರಶೇಖರ ಪೇರಾಲು ಅವರನ್ನು ಸನ್ಮಾನಿಸಲಾಯಿತು.
ಹಿರಿಯ ರೋಟರಿ ಸದಸ್ಯ ಬಾಪು ಸಾಹೇಬ್ ಸನ್ಮಾನ ನೆರವೇರಿಸಿದರು. ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ್ ಅಧ್ಯಕ್ಷತೆ ವಹಿಸಿದ್ದರು.ರೋಟರಿ ಅಸಿಸ್ಟೆಂಟ್ ಗವರ್ನರ್ ಆನಂದ ಖಂಡಿಗ, ಸುಧಾಕರ ಕೊಚ್ಚಿ, ರಾಮ್ ಮೋಹನ್ ಉಪಸ್ಥಿತರಿದ್ದರು.ದಳ ಸುಬ್ರಾಯ ಭಟ್ ಪ್ರಾರ್ಥಿಸಿದರು, ಪುರುಷೋತ್ತಮ ಕಿರ್ಲಾಯ, ಚಂದ್ರಮತಿ ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು. ಅಬ್ದುಲ್ ಕಲಾಂ ಸನ್ಮಾನ ಪತ್ರ ವಾಚಿಸಿದರು.ಕಾರ್ಯದರ್ಶಿ ಹರಿರಾಯ ಕಾಮತ್ ವಂದಿಸಿದರು.












