ಸುಳ್ಯ: ಕಳೆದ ಎರಡು ದಶಕಗಳಿಂದ ಸುಳ್ಯದಲ್ಲಿ ಕಾರ್ಯ ನಿರ್ವಹಿಸಿ ಆಕರ್ಷಕ ಪಾದರಕ್ಷೆಗಳನ್ನು ನೀಡಿ ಗ್ರಾಹಕರ ಮನಗೆದ್ದು ಸುಳ್ಯದ ಮನೆ ಮಾತಾಗಿರುವ ಪಾದರಕ್ಷಗಳ ಮಳಿಗೆ ‘ಶೂ ಬಿಝ್’ ನವೀಕರಣಗೊಂಡು ಶುಭಾರಂಭಗೊಂಡಿದೆ. ಸುಳ್ಯ ನಗರದ ಹೃದಯ ಭಾಗದಲ್ಲಿ ಖಾಸಗೀ ಬಸ್ ನಿಲ್ದಾಣದ ಬಳಿಯ ಡಿ.ಎಂ.ಕಾಂಪ್ಲೆಕ್ಸ್ನಲ್ಲಿರುವ ‘ಶೂ ಬಿಝ್’ ಮಳಿಗೆ ಹೊಸತಾಗಿ ನವೀಕರಣಗೊಂಡಿದೆ. ಡಿ.2 ರಂದು ನಡೆದ
ಸಮಾರಂಭದಲ್ಲಿ. ಕುಂಞಿಕೋಯ ಸಅದಿ ತಂಙಳ್ ಸುಳ್ಯ ದುವಾ ನೆರವೇರಿಸಿ ಉದ್ಘಾಟಿಸಿದರು. ಶೂಬಿಝ್ ಪಾದರಕ್ಷೆ ಮಳಿಗೆಯ ಸ್ಥಾಪಕರಾದ ಎ.ಎಂ.ಅಬೂಬಕ್ಕರ್ ಹಾಜಿ, ರಝಾಕ್ ಹಾಜಿ ಶೀತಲ್, ಶಾಫಿ ಮುಕ್ರಿ, ನಾಸಿರ್ ಬಿಝ್, ಯು.ಪಿ.ಬಶೀರ್, ಝೈನುದ್ದೀನ್ ಸವಣೂರು, ಹಮೀದ್ ಸಮ್ಮರ್ಕೂಲ್, ನಿಯಾಝ್ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.

ಶುಭಾರಂಭ ಪ್ರಯುಕ್ತ ಆಕರ್ಷಕ ಹೊಚ್ಚ ಹೊಸ ಪಾದರಕ್ಷಗಳ ಅಪೂರ್ವ ಸಂಗ್ರಹದೊಂದಿಗೆ ಮಳಿಗೆ ಕಂಗೊಳಿಸುತಿದೆ. ನವೀಕರಣ ಹಾಗೂ ಶುಭಾರಂಭದ ಪ್ರಯುಕ್ತ ಪಾದರಕ್ಷೆಗಳಿಗೆ ಶೇ.10ರಿಂದ ಶೇ.50ರ ತನಕ ದರ ಕಡಿತ ಮಾರಾಟ ಮಾಡಲಾಗುತಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ. ಪುರುಷರ, ಮಹಿಳೆಯರ, ಮಕ್ಕಳ ಸೇರಿದಂತೆ ಎಲ್ಲಾ ಜನರ ಆಕರ್ಷಕ ಮತ್ತು ನವ ನವೀನ ವಿನ್ಯಾಸದ ಪಾದರಕ್ಷಗಳ ಸಂಗ್ರಹ ಬಂದಿದೆ. ಆಕರ್ಷಕ ಪಾದರಕ್ಷೆಗಳನ್ನು ಅತಿ ಕಡಿಮೆ ದರದಲ್ಲಿ ಖರೀದಿಸಲು ಶೂಬಿಝ್ ಮಳಿಗೆಗೆ ಇಂದೇ ಭೇಟಿ ಕೊಡಿ.