ಸುಳ್ಯ:2024-25ನೇ ಸಾಲಿನಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ಹೊಸ ಕೊಠಡಿ ನಿರ್ಮಾಣ, ದುರಸ್ತಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ಒಟ್ಟು 2.48 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಸರಕಾರಿ ಶಾಲೆಗಳಿಗೆ ಹೊಸ ಕೊಠಡಿಗಳ ನಿರ್ಮಾಣಕ್ಕೆ
ರೂ. 72.50 ಲಕ್ಷ ಮಂಜೂರಾಗಿದೆ. ಕಲ್ಮಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 14.50 ಲಕ್ಷ, ಮುರುಳ್ಯ ಸ.ಹಿ.ಪ್ರಾ.ಶಾಲೆಗೆ 14.50 ಲಕ್ಷ, ದೇರಾಜೆ ಸ.ಹಿ.ಪ್ರಾ.ಶಾಲೆಗೆ 14.50 ಲಕ್ಷ, ಕುಂತೂರು ಸ.ಹಿ.ಪ್ರಾ.ಶಾಲೆಗೆ 29 ಲಕ್ಷ ರೂ ಮಂಜೂರಾಗಿದೆ. ಶೌಚಾಲಯ ನಿರ್ಮಾಣಕ್ಕೆ 8 ಶಾಲೆಗಳಿಗೆ ಒಟ್ಟು 67.60 ಲಕ್ಷ ಮಂಜೂರಾಗಿದೆ. ಸರಕಾರಿ ಶಾಲಾ ಕೊಠಡಿಗಳ ದುರಸ್ತಿ ಕಾಮಗಾರಿಗೆ 28 ಶಾಲೆಗಳಿಗೆ ಒಟ್ಟು 53.55 ಲಕ್ಷ ಅನುದಾನ ಮಂಜೂರಾಗಿದೆ. ದ್ವಿತೀಯ ಹಂತದಲ್ಲಿ ಶಾಲಾ ಕೊಠಡಿಗಳ ದುರಸ್ತಿಗೆ 55 ಲಕ್ಷ ಮಂಜೂರಾಗಿದೆ. ಸರಕಾರಿ ಪ.ಪೂ.ಕಾಲೇಜು ಹೈಸ್ಕೂಲ್ ವಿಭಾಗ 15 ಲಕ್ಷ, ಅಜ್ಜಾವರ ಸರಕಾರಿ ಪ್ರೌಢ ಶಾಲೆ ದುರಸ್ತಿಗೆ 20 ಲಕ್ಷ, ಕಡಬ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 20 ಲಕ್ಷ ಮಂಜೂರಾಗಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.