ಸುಳ್ಯ: ಸಂಪಾಜೆ ಗ್ರಾಮದ ಕಲ್ಲುಗುಂಡಿ, ಸಂಪಾಜೆ, ಗೂನಡ್ಕ ಭಾಗದಲ್ಲಿ ಕಳೆದ ಬಾರಿಯ ಜಲ ಪ್ರಳಯದ ಕಾರಣದಿಂದ ನದಿಯಲ್ಲಿ ಹೂಳು ತುಂಬಿದೆ. ಈ ರೀತಿ ಹೂಳು ತುಂಬಿರುವ ಕಾರಣ ಈ ಬಾರಿಯೂ ಮಳೆಗಾಲದಲ್ಲಿ ಪ್ರಳಯ ಉಂಟಾಗಬಹುದು ಉಂಟಾಗಬಹುದು ಎಂಬ
ಆತಂಕ ಎದುರಾಗಿದೆ. ಈ ಹಿನ್ನಲೆಯಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದರು. ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಸರ್ವೆ ಇಲಾಖೆಯ ಮೂಲಕ ಸರ್ವೆ ಕಾರ್ಯ ನಡೆಸಲಾಯಿತು. ಸರ್ವೇ ಇಲಾಖೆಯ ಮೂಲಕ ಸರ್ವೆ ನಡೆಸಿ ಹೂಳೆತ್ತಲು 5 ಸ್ಪಾಟ್ಗಳನ್ನು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಪಂಚಾಯತ್ ಸದಸ್ಯರಾದ ಜಗದೀಶ್ ರೈ, ಅಬೂಸಾಲಿ. ಪಿ. ಕೆ .ವಿಜಯ ಕುಮಾರ್, ಊರ ಪ್ರಮುಖರಾದ ಪದ್ಮಯ್ಯ ಗೌಡ, ರವಿಶಂಕರ್ ಭಟ್, ಮಂಜುನಾಥ್ ಕಲ್ಲುಗುಂಡಿ ಇಲಾಖೆಯ ಅದಿಕಾರಿ ವರ್ಗದವರು ಉಪಸ್ಥಿತರಿದ್ದರು.