ಸುಳ್ಯ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೋಟೆಲೊಂದರ ಮುಂಭಾಗದ ಗೋಡೆಗೆ ಢಿಕ್ಕಿ ಹೊಡೆದು ಕಾರಿನಲ್ಲಿದ್ದ ದಂಪತಿ ಗಾಯಗೊಂಡ ಘಟನೆ ಮೇ.1ರಂದು ಸಂಪಾಜೆಯಲ್ಲಿ ನಡೆದಿದೆ. ಪುತ್ತೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಾರು
ಚಾಲಕನ ನಿಯಂತ್ರಣ ತಪ್ಪಿ ಸಂಪಾಜೆಯ ಹೈವೆ ಹೋಟೆಲ್ನ ಮುಂಭಾಗದ ಗೋಡೆಗೆ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ವಿಟ್ಲ ಮೂಲದ ದಂಪತಿಗಳು ಗಾಯಗೊಂಡಿದ್ದಾರೆ. ಕಾರು ಜಖಂಗೊಂಡಿದೆ. ಗಾಯಾಳುಗಳನ್ನು
ಸ್ಥಳೀಯರು ಸೇರಿ ಅಂಬ್ಯುಲೆನ್ಸ್ ಮೂಲಕ ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.