ಸುಳ್ಯ:ಸಂಪಾಜೆ ಗ್ರಾಮ ಪಂಚಾಯತ್, ಲಯನ್ಸ್ ಕ್ಲಬ್ ಸಂಪಾಜೆ,ರೆಡ್ ಕ್ರಾಸ್ ಸೊಸೈಟಿ, ಲೇಡಿಕೋಷನ್ ಹಾಸ್ಪಿಟಲ್ ಇದರ ಆಶ್ರಯದಲ್ಲಿ ಅಕ್ಷಯ ಚಾರಿಟೇಬಲ್ ಟ್ರಸ್ಟ್ ಇದರ 22ನೇ ರಕ್ತದಾನ ಶಿಬಿರ ಸಂಪಾಜೆ ಗ್ರಾಮ ಪಂಚಾಯತ್ ಸಬಾಭವನದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು, ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಲಯನ್ಸ್ ಕ್ಲಬ್
ಅಧ್ಯಕ್ಷರಾದ ಯೋಗಿಶ್ವರ್ ರಕ್ತದಾನದ ಮಾಹಿತಿ ನೀಡಿದರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್. ಕೆ. ಹನೀಫ್ .
ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಮಾಜಿ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಸದಸ್ಯರಾದ ಅಬೂಸಾಲಿ ಗೂನಡ್ಕ, ವಿಮಲಾ ಪ್ರಸಾದ್,ವಿಜಯಕುಮಾರ್, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್, ಗ್ರಾ.ಪಂ.ಮಾಜಿ ಅಧ್ಯಕ್ಷೆ ಯಮನ ಬಿ. ಎಸ್, ಪಂಚಾಯತ್ ಸದಸ್ಯರಾದ , ಲಯನ್ಸ್ ಕ್ಲಬ್ ನ ಕಿಶೋರ್, ಪ್ರಶಾಂತ್ ಇ. ವಿ. ನವೀನ್ ಚಂದ್ರ, ವಾಸುದೇವ ಕಟ್ಟೆಮನೆ, ಇಂದಿರಾ ದೇವಿಪ್ರಸಾದ್ , ಕರೀಂ, ಸಿದ್ದಿಕ್ ಕಟ್ಟೆಕಾರ್, ಸಿದ್ದಿಕ್ ದರ್ಕಾಸ್, ಡಾ ಜಯರಾಮ್, ಧರ್ಮಸ್ಥಳ ವಿಪತ್ತು ತಂಡದ ಚಿದಾನಂದ ಮತ್ತು ತಂಡ ಅಲ್. ಅಮೀನ್ ಸಂಸ್ಥೆಯ ಸಾದಿಕ್ ಕುಂಭಕೋಡ್, ಮಾಜಿ ಪಂಚಾಯತ್ ಉಪಾಧ್ಯಕ್ಷೆ ಆಶಾ ವಿನಯಕುಮಾರ್,ಜಯಾನಂದ ಸಂಪಾಜೆ ಸಂಘ ಸಂಸ್ಥೆಯ ಪದಾಧಿಕಾರಿಗಳು ಯುವಕರು ರಕ್ತದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು