ಸುಳ್ಯ:ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗು ಸಂಘಟನಾ ಸಮಿತಿ ವತಿಯಿಂದ 27ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ವತಿಯಿಂದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಲೀಲಾ ದಾಮೋದರ ಇವರಿಗೆ ಅಧಿಕೃತ ಆಹ್ವಾನ ಹಾಗೂ ಫಲ ತಾಂಬೂಲ ನೀಡಿ ಗೌರವಿಸಲಾಯಿತು. ಸಂಘಟನಾ ಸಮಿತಿಯ
ಅಧ್ಯಕ್ಷರಾದ ಕೇಶವ ಅಡ್ತಲೆ, ಸಂತೋಷ ಕುತ್ತಮೊಟ್ಟೆ, ಪೂರ್ವ ಸಮ್ಮೇಳನಾಧ್ಯಕ್ಷ ಕೆ ಆರ್ ಗಂಗಾಧರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ಇವರು ಕನ್ನಡ ಶಾಲು ಫಲ ತಾಂಬೂಲ ಆಮಂತ್ರಣ ನೀಡಿ ಅಧಿಕೃತವಾಗಿ ಅಹ್ವಾನಿಸಿದರು. ಕಾರ್ಯಕ್ರಮದಲ್ಲಿ ಸುಳ್ಯ ಹೋಬಳಿ ಘಟಕದ ಅದ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಪಂಜ ಹೋಬಳಿ ಘಟಕ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಳ್ಳತ್ತಡ್ಕ, ಕೋಶಾಧಿಕಾರಿ ದಯಾನಂದ ಆಳ್ವ, ಗಣೇಶ ಭಟ್ ಸಿಎ, ಕುಮಾರ ಸ್ವಾಮಿ ತೆಕ್ಕುಂಜ, ಲತಾ ಸುಪ್ರೀತ್ ಮೋಂಟಡ್ಕ, ಡಾ.ಎಸ್ ರಂಗಯ್ಯ, ಅಬ್ದುಲ್ಲಾ ಅರಂತೋಡು, ಹೇಮಾವತಿ ಕೊಯಿಂಗೊಡಿ, ದಾಮೋದರ ಕುಂದಲಪ್ಪಾಡಿ ಹಾಗು ಮತ್ತಿತರರು ಉಪಸ್ಥಿತರಿದ್ದರು.