ಶಬರಿಮಲೆ: ಮಕರ ಜ್ಯೋತಿ ತೀರ್ಥಯಾತ್ರೆಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರೆಯಿತು. ತಂತ್ರಿ ಕಂಠರಾರ್ ರಾಜೀವರ್ ಅವರ ಉಪಸ್ಥಿತಿಯಲ್ಲಿ, ಪ್ರಧಾನ ಅರ್ಚಕ ಎಸ್.ಅರುಣ್ ಕುಮಾರ್ ನಂಬೂದಿರಿ ದೇವಸ್ಥಾನದ
ಬಾಗಿಲು ತೆರೆದದರು. ಮಾಳಿಗಪ್ಪುರಂ ದೇವಸ್ಥಾನವನ್ನು ತೆರೆಯಲು ಪ್ರಮುಖ ಅರ್ಚಕ ವಾಸುದೇವನ್ ನಂಬೂದಿರಿಗೆ ಕೀಲಿಕೈ ಹಸ್ತಾಂತರಿಸಲಾಯಿತು.
18ನೇ ಮೆಟ್ಟಿಲು ಬಳಿ ಅಗ್ನಿ ಕುಂಡಕ್ಕೆ ಬೆಂಕಿ ಸ್ಪರ್ಶಿಸಿದ ನಂತರ ಭಕ್ತರಿಗೆ 18 ಮೆಟ್ಟಿಲು ಹತ್ತಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.18 ಮೆಟ್ಟಿಲು ಏರಲು ಭಾರೀ ಉದ್ದದ ಸರತಿ ಸಾಲು ಕಂಡು ಬಂದಿತು.14ರಂದು ಮಕರ ಜ್ಯೋತಿ ದರ್ಶನವಾಗಲಿದೆ.