ಸುಳ್ಯ:ರಾಯಲ್ ಸ್ಟಾರ್ ಇವಿ ಸ್ಕೂಟರ್ ಶೋರೂಮ್ ಸುಳ್ಯದಲ್ಲಿ ಅ.20ರಂದು ಶುಭಾರಂಭಗೊಂಡಿತು. ಮಹಮ್ಮದ್ ಇಕ್ಬಾಲ್ ಎಲಿಮಲೆ ಹಾಗೂ ಹಾಜಿ ಇಬ್ರಾಹಿಂ ಕತ್ತರ್ ಮಾಲಕತ್ವದ ರಾಯಲ್ ಸ್ಟಾರ್ ಇವಿ ಸ್ಕೂಟರ್ ಶೋರೂಮ್ ಸುಳ್ಯ ಜ್ಯೂನಿಯರ್ ಕಾಲೇಜು ರಸ್ತೆಯಲ್ಲಿ ತಾಲೂಕು ಪಂಚಾಯತ್ ಬಳಿಯ ಮಹಿಳಾ ಸಹಕಾರಿ ಸಂಘದ
ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.ಪಾಲುದಾರರ ಮಕ್ಕಳಾದ ಇಶಾತ್ ಇಬ್ರಾಹಿಂ ಎಲಿಮಲೆ ಹಾಗೂ ಅಬ್ದುಲ್ ಗಫಾರ್ ಮಂಡೆಕೋಲು ನೂತನ ಶೋರೂಮ್ ಉದ್ಘಾಟಿಸಿದರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಆಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ತಾಲೂಕು ಪಂಚಾಯತ್

ಮಾಜಿ ಉಪಾಧ್ಯಕ್ಷ ಪಿ.ಸಿ.ಜಯರಾಮ,ತಾ.ಪಂ.ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎನ್.ಎ.ರಾಮಚಂದ್ರ, ಎಸ್.ಸಂಶುದ್ದೀನ್,ಎಂ.ವೆಂಕಪ್ಪ ಗೌಡ, ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ, ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ರಾಜೀವಿ ಆರ್.ರೈ, ಪ್ರಮುಖರಾದ ಧನಂಜಯ ಅಡ್ಪಂಗಾಯ, ಕೆ.ಎಸ್.ಉಮ್ಮರ್, ಎಂ.ಬಿ.ಸದಾಶಿವ, ಕರುಣಾಕರ ಅಡ್ಪಂಗಾಯ, ಭವಾನಿಶಂಕರ ಕಲ್ಮಡ್ಕ, ಅಬ್ದುಲ್ ರಝಾಕ್ ರಾಜಧಾನಿ, ಶೈಲೇಶ್ ಅಂಬೆಕಲ್ಲು ಇಬ್ರಾಹಿಂ ಅಲೆಕ್ಕಾಡಿ, ಶಹದ್ ಅಲೆಕ್ಕಾಡಿ, ಫೈಝಲ್ ಜೀರ್ಮುಕಿ, ಹನೀಫ ಸಲಾಲ ಬೆಳ್ಳಾರೆ, ಸಿದ್ದಿಕ್ ಜೀರ್ಮುಖಿ, ಹಸನ್ ಹರ್ಲಡ್ಕ, ತಾಜ್ ಮಹಮ್ಮದ್ ಸಂಪಾಜೆ, ಇರ್ಷಾದ್ ಕಲ್ಲುಗುಂಡಿ, ಅನ್ವರ್ ಪಂಜಿಕಲ್ಲು, ಈಶ್ವರ ಮಂಗಲ ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ನ ನಿರ್ದೇಶಕ ಅಬ್ದುಲ್ ರಹಮಾನ್ ಮೇನಾಲ, ಈಶ್ವರ ಮಂಗಲ ಹಿರಾ ಟವರ್ನ ಮಾಲಕ ಖಾದರ್ ಹಾಜಿ ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಇಕ್ಬಾಲ್ ಎಲಿಮಲೆ ಸ್ವಾಗತಿಸಿ,ಹಾಜಿ ಇಬ್ರಾಹಿಂ ಕತ್ತರ್ ವಂದಿಸಿದರು. ಕೆ.ಎಂ.ಮುಸ್ತಫ ಕಾರ್ಯಕ್ರಮ ನಿರೂಪಿಸಿದರು. ಶಬೀರ್ ಪ್ರಥಮ ಗ್ರಾಹಕರಾಗಿ ಸ್ಕೂಟರ್ ಖರೀದಿಸಿದರು
ರಾಯಲ್ ಸ್ಟಾರ್ ಇವಿ ಸ್ಕೂಟರ್ ಇಲೆಕ್ಟ್ರಿಕ್ ಚಾಲಿತ ಸ್ಕೂಟರ್ ಶೋರೂಮ್ ಇದಾಗಿದ್ದು ಸುಳ್ಯದಲ್ಲಿ ಪ್ರಥಮ ಬಾರಿಗೆ ಆರಂಭಗೊಳ್ಳುತಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 60ರಿಂದ 70 ಕಿ.ಮಿ, 80 ರಿಂದ 90 ಕಿ.ಮಿ. ಚಾಲನೆ ಮಾಡಬಹುದಾದ ವಿವಿಧ ಮಾದರಿಯ ಇಲೆಕ್ಟ್ರಿಕ್ ಸ್ಕೂಟರ್ ಲಭ್ಯವಿರಲಿದೆ. ನೋಂದಾವಣೆ ರಹಿತ, ಪರವಾನಿಗೆ ರಹಿತ ಸ್ಕೂಟರ್ ಇದಾಗಿದ್ದು ಶುಭಾರಂಭದ ಕೊಡುಗೆಯಾಗಿ ಹೆಲ್ಮೆಟ್ ಉಚಿತ ನೀಡಲಾಗುವುದು ಎಂದು ಸಂಸ್ಥೆಯ ಪಾಲುದಾರರಾದ ಇಕ್ಬಾಲ್ ಎಲಿಮಲೆ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು.
7019325255
8884944445


















