ಸುಳ್ಯ: ಸುಳ್ಯ ರೋಟರಿ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 1ರಂದು ಸಂಜೆ 6.30ರಂದು ಸುಳ್ಯ ರಥಬೀದಿಯ ರೋಟರಿ ಸಮುದಾಯ ಭವನದಲ್ಲಿ ನಡೆಯಲಿದೆ.ರೋಟರಿ ಕ್ಲಬ್ನ ನಿಯೋಜಿತ ಅಧ್ಯಕ್ಷೆ ಲತಾ ಮಧುಸೂದನ್ ಅವರ ನೇತೃತ್ವದ ನೂತನ ತಂಡ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಯೋಜಿತ ಅಧ್ಯಕ್ಷೆ ಲತಾ ಮಧುಸೂದನ್ ಪದಗ್ರಹಣ ಸಮಾರಂಭದ
ಮಾಹಿತಿ ನೀಡಿದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ದತ್ತಾತ್ರೇಯ ರಾವ್ ಪದಗ್ರಹಣ ನೆರವೇರಿಸಲಿದ್ದಾರೆ. ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ವಿಕ್ರಮ್ ದತ್ತಾ ಮುಖ್ಯ ಅತಿಥಿಯಾಗಲಿದ್ದಾರೆ.ವಲಯ 5ರ ಅಸಿಸ್ಟೆಂಟ್ ಗವರ್ನರ್ ಆನಂದ ಖಂಡಿಗೆ, ಝೋನಲ್ ಲೆಪ್ಟಿನೆಂಟ್ ಗಿರೀಶ್ ನಾರ್ಕೋಡು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಶಿಕ್ಷಣ, ಸಾಮಾಜಿಕ ಕ್ಷೇತ್ರ ಸೇರಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು
ಎಂದು ಅವರು ವಿವರಿಸಿದರು.
ರೋಟರಿ ಜಿಲ್ಲಾ ಕಾರ್ಯಕ್ರಮದ ಅಂಗವಾಗಿ ಆರೋಗ್ಯ ಸುರಕ್ಷಾ ಕಾರ್ಯಕ್ರಮಗಳು,ಜೀವನ್ ರಕ್ಷಾ ಕಾರ್ಯಕ್ರಮಗಳು, ರಕ್ತನಿಧಿ ಕಾರ್ಯಕ್ರಮ, ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ,ರಸ್ತೆ ಸುರಕ್ಷತಾ ಕಾರ್ಯಕ್ರಮ,ಪರಿಸರ ಕಾರ್ಯಕ್ರಮಗಳು, ಜಲ ಸಂಜೀವಿನಿ, ಶಾಲಾ

ಆವರಣಗಳಲ್ಲಿ ಗಿಡ ನೆಡುವ ಕಾರ್ಯಕ್ರಮ, ಮಹಿಳಾ ಶಶಕ್ತೀಕರಣ ಕಾರ್ಯಕ್ರಮ, ಹಿರಿಯ ನಾಗರಿಕ ಕಲ್ಯಾಣ ಕಾರ್ಯಕ್ರಮಗಳು, ಸಾಂತ್ವನ ಹಾಗು ಸಂಧ್ಯಾ ಸುರಕ್ಷಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸುಳ್ಯ ರೋಟರಿ ಕ್ಲಬ್ ಪ್ರೋಜೆಕ್ಟ್ ಅಂಗವಾಗಿ ರೋಟರಿ ಶಾಲೆಯ ಅಭಿವೃದ್ಧಿ, ಮಹಿಳೆಯರಿಗೆ ಆರೋಗ್ಯ ಕಾರ್ಯಕ್ರಮಗಳನ್ನು, ಕ್ಯಾನ್ಸರ್ ಜಾಗೃತಿ, ಲಸಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಲತಾ ಮಧುಸೂದನ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ನ ನಿಯೋಜಿತ ಕಾರ್ಯದರ್ಶಿ ಕೆ.ಹರಿರಾಯ ಕಾಮತ್, ಕೋಶಾಧಿಕಾರಿ ನಳಿನಿ ಕಿರ್ಲಾಯ, ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಮ್ಮೋಹನ್, ಕಾರ್ಯದರ್ಶಿ ಭಾಸ್ಕರ ನಾಯರ್ ಎಂ.ಆರ್, ಕೋಶಾಧಿಕಾರಿ ಮಾಧವ.ಬಿ.ಟಿ, ರೋಟರಿ ಅಸಿಸ್ಟೆಂಟ್ ಗವರ್ನರ್ ಆನಂದ ಖಂಡಿಗ, ಪದಾಧಿಕಾರಿಗಳಾದ ಗಣೇಶ್ ಭಟ್, ರಾಮಚಂದ್ರ.ಪಿ, ಮಧುಸೂದನ್ ಕುಂಭಕ್ಕೋಡು, ಜಿತೇಂದ್ರ ಎನ್.ಎ, ಪ್ರಭಾಕರನ್ ನಾಯರ್.ಸಿ.ಎಚ್, ಧನಲಕ್ಷ್ಮಿ ಕುದ್ಪಾಜೆ ಉಪಸ್ಥಿತರಿದ್ದರು.






