ಸುಳ್ಯ:ಸುಳ್ಯ ತಾಲೂಕಿನ ಆಡಿಂಜದಿಂದ ಆಲೆಟ್ಟಿ ವರೆಗಿನ ಲೋಕೋಪಯೋಗಿ ರಸ್ತೆಯು ತೀವ್ರ ಹದೆಗೆಟ್ಟಿದ್ದು, ಇಲಾಖೆಯಾಗಲಿ, ಜನಪ್ರತಿನಿದಿಗಳಾಗಲಿ ಎಷ್ಟೇ ಮನವಿಮಾಡಿದರೂ ಸ್ಪಂದಿಸದೇ ಇರದಿರುವುದರಿಂದ ಈ ಭಾಗದ ಸಾರ್ವಜನಿಕರು ಮತ್ತು
ಸ್ಥಳೀಯ ಯುವಕ ಮಂಡಲಗಳ ಸದಸ್ಯರು ಸೇರಿಕೊಂಡು ಶ್ರಮದಾನದ ಮೂಲಕ ರಸ್ತೆ ದುರಸ್ಥಿ ಪಡಿಸಿದರು. ರಸ್ತೆಯುದ್ದಕ್ಕೂ ಅಲ್ಲಲ್ಲಿ ಹೊಂಡ ಗುಂಡಿಗಳಿಂದ ತುಂಬಿರುವ ರಸ್ತೆಗೆ ರೆಡಿ ವೆಟ್ ಮಿಕ್ಸ್ ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚಿದರು. ಸ್ಥಳೀಯ ಪ್ರಮುಖರು ವೆಟ್ ಮಿಕ್ಸ್, ಹಿಟಾಚಿ, ವಾಹನ ನೀಡಿ ಸಹಕರಿಸಿದರು.ಮುಂದಿನ ದಿನಗಳಲ್ಲಿ ಕಲ್ಲಪಳ್ಳಿ, ಕೂರ್ನಡ್ಕ, ಆಲೆಟ್ಟಿ ಭಾಗದ ಜನರನ್ನು ಸೇರಿಸಿಕೊಂಡು ರಸ್ತೆ ಅಭಿವೃದ್ಧಿ ಸಮಿತಿ ರಚಿಸಿ ಪಕ್ಷಾತೀತವಾಗಿ ಹೋರಾಟ ಮಾಡಲು ಈ ಭಾಗದ ಜನತೆ ನಿರ್ಧರಿಸಿದ್ದಾರೆ ಎಂದು ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸತ್ಯಕುಮಾರ್ ಆಡಿಂಜ ತಿಳಿಸಿದ್ದಾರೆ.















