ಸುಳ್ಯ: ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಸುಳ್ಯ ನಗರದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಸಾಧಾರಣ ಮಳೆಯಾಗಿದೆ. ಸಂಪಾಜೆಯಲ್ಲಿ ಉತ್ತಮ ಮಳೆಯಾಗಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ
ಮಳೆ ಸುರಿದಿದೆ.ಕೇರ್ಪಡ, ಬಾಳಿಲ, ಕರಿಕ್ಕಳ, ಉಬರಡ್ಕ, ಎಣ್ಮೂರು, ಕಲ್ಮಡ್ಕ ಕುಲ್ಕುಂದ, ಸುಬ್ರಹ್ಮಣ್ಯ, ಗಡಿ ಪ್ರದೇಶ ದೇಲಂಪಾಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆಯಾಗಿದೆ. ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಮಳೆಯಾಗಿದೆ.ಕೆಲವೆಡೆ ಉತ್ತಮ ಮಳೆಯಾದರೆ, ಕೆಲವೆಡೆ, ಸಾಧಾರಣ ಮಳೆಯಾಗಿದೆ. ಇನ್ನು ಕೆಲವೆಡೆ ಹನಿ ಮಳೆಯಷ್ಟೇ ಆಗಿದೆ.ಸಂಪಾಜೆಯಲ್ಲಿ ಮಳೆಗೆ ಬೃಹತ್ ಮರ ಮುರಿದು ಬಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆಯಾಗಿದೆ. ಸಾರ್ವಜನಿಜಕರು ಸೇರಿ ಮರ ತೆರವು ಮಾಡಿದರು.