ಸುಳ್ಯ:ಬಿಸಿಲು ಮತ್ತು ಏರಿದ ಸೆಕೆಯಿಂದ ಬಸವಳಿದ ಭುವಿಗೆ ತಂಪೆರೆದು ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಶನಿವಾರ ಸಂಜೆ ಮಳೆಯಾಗಿದೆ. ಸುಬ್ರಹ್ಮಣ್ಯ ಕಡಬ, ಗುತ್ತಿಗಾರು, ಮಡಪ್ಪಾಡಿ, ನಡುಗಲ್ಲು ಮರ್ಕಂಜ ಸೇರಿ ವಿವಿಧ ಭಾಗಗಳಲ್ಲಿ ಸಂಜೆಯ ವೇಳೆಗೆ
ತುಂತುರು ಮಳೆಯಾಗಿದೆ. ಐವರ್ನಾಡು ಸೇರಿ ಕೆಲವೆಡೆ ರಾತ್ರಿಯ ವೇಳೆಗೆ ಅಲ್ಪ ಮಳೆ ಸುರಿದಿದೆ. ಮಡಪ್ಪಾಡಿ 07 ಮಿ.ಮಿ, ನಡುಗಲ್ಲು 02 ಮಿ.ಮೀ ಮಳೆಯಾಗಿದೆ. ಕಡಬ ಪುತ್ತೂರು ತಾಲೂಕಿನ ಕೆಲವು ಕಡೆ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ತಾಪಮಾನ ಏರಿಕೆಯಾಗಿದೆ. ನಿನ್ನೆಯ ಗರಿಷ್ಟ ತಾಪಮಾನ ಹಲವು ಕಡೆ 36° ಸೆ. ಗೂ ಅಧಿಕವಾಗಿತ್ತು.ಅನಿರೀಕ್ಷಿತವಾಗಿ ಮಳೆ ಸುರಿದ ಕಾರಣ ಅಡಿಕೆ ಒಣಗಲು ಹಾಕಿದ ಕೃಷಿಕರಿಗೆ ಸಮಸ್ಯೆಯಾಗಿದೆ. ಕೆಲವೆಡೆ ಒಣಗಲು ಹಾಕಿದ ಅಡಿಕೆ ಒದ್ದೆಯಾದ ಬಗ್ಗೆ ವರದಿಯಾಗಿದೆ.