ಸುಳ್ಯ:ರಾಜ್ಯದಲ್ಲಿಯೇ ಅತೀ ಹೆಚ್ಚು ಉಷ್ಣಾಂಶ ದಾಖಲಾಗುವ ಮೂಲಕ ಬಿಸಿಲೂರಾದ ಸುಳ್ಯದಲ್ಲಿ ತುಂತುರು ಮಳೆಯಾಗಿದೆ. ಮಧ್ಯಾಹ್ನ ಬಳಿಕ ಮೋಡ ಕವಿದ ವಾತಾವರಣ ಇದ್ದು 3.30ರ ವೇಳೆಗೆ ಸುಳ್ಯ ನಗರ ಸೇರಿದಂತೆ ಕೆಲವೆಡೆ ಕೆಲ ಹೊತ್ತು ತುಂತುರು ಮಳೆ ಸುರಿದಿದೆ.ದಟ್ಟ ಮೋಡ ಕವಿದಿದ್ದು

ಕೆಲವೆಡೆ ತುಂತುರು ಮಳೆಯಾದರೆ, ಕೆಲವೆಡೆ ಸಾಧಾರಣ ಮಳೆ ಸುರಿದಿದೆ. ಗುಡುಗು ಸಹೀತ ಮಳೆಯಾಗಿದೆ. ಸುಳ್ಯ ನಗರ, ಕಲ್ಲಾಜೆ, ಎಣ್ಮೂರು ಹರಿಹರ ಮಲ್ಲಾರ ಮತ್ತಿತರ ಕಡೆಗಳಲ್ಲಿ ತುಂತುರು ಮಳೆಯಾದ ಬಗ್ಗೆ ವರದಿಯಾಗಿದೆ. ಕಡಬ ತಾಲೂಕಿನ ಕೆಲ ಭಾಗಗಳಲ್ಲಿಯೂ ತುಂತುರು ಮಳೆಯಾಗಿದೆ.
ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ರಾಜ್ಯದ ಕೆಲವೆಡೆ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ ಎಂದು ಇಲಾಖೆ ಹೇಳಿತ್ತು. ಮಳೆ ಸುರಿದಿದೆ. ಕರಾವಳಿಯಲ್ಲಿ ತಾಪಮಾನ ಹೆಚ್ಚಳವಾಗಿದ್ದು, ದಕ್ಷಿಣ ಕನ್ನಡದ ಸುಳ್ಯದಲ್ಲಿ ಗರಿಷ್ಠ ಉಷ್ಣಾಂಶ (41.4 ಡಿಗ್ರಿ ಸೆಲ್ಸಿಯಸ್) ಅತೀ ಹೆಚ್ಚು ಉಷ್ಣಾಂಶ ಮಂಗಳವಾರ ದಾಖಲಾಗಿತ್ತು. ಬುಧವಾರ ಉಷ್ಣಾಂಶ ಹಾಗೂ ಸೆಕೆ ಸ್ವಲ್ಪ ಕಡಿಮೆ ಇತ್ತು. ಮೋಡ ಕವಿದು ಮಳೆಯ ಸಿಂಚನವಾದ ಕಾರಣ ಸೆಕೆ ತಾತ್ಕಾಲಿಕವಾಗಿ ಸ್ವಲ್ಪ ಕಡಿಮೆಯಾಗಿದೆ.
