ಸುಳ್ಯ: ಸುಳ್ಯ ನಗರದ ಜಟ್ಟಿಪಳ್ಳ ರಸ್ತೆಗೆ ತೆಂಗಿನಮರವೊಂದು ಮುರಿದು ಬಿದ್ದು ಸಂಚಾರಕ್ಕೆ ತಡೆ ಉಂಟಾಗಿದೆ. ಅಲ್ಲದೆ ತೆಂಗಿನ ಮರ ವಿದ್ಯುತ್ ಲೈನ್ ನ ಮೇಲೆ ಬಿದ್ದು, ಕಂಬ, ತಂತಿಗೆ ಹಾನಿ ಉಂಟಾಗಿದೆ. ಜನ ನಿಬಿಡ ರಸ್ತೆಯಲ್ಲಿ ತೆಂಗಿನ ಮರ ಮುರಿದು ಬಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಮತ್ತು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ರಿಕ್ಷಾ ಮತ್ತಿತರ ವಾಹನಗಳು ಕೂದಲೆಳೆ ಅಂತರದಲ್ಲಿ ಪಾರಾದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.