ಸುಳ್ಯ:ಜಿಲ್ಲೆಯಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗುವ ಸೂಚನೆಯ ಮಧ್ಯೆಯೇ ಸುಳ್ಯದಲ್ಲಿ ಮೇ.19ರಂದು ಉತ್ತಮ ಮಳೆಯಾಗಿದೆ. ಗುಡುಗು ಸಿಡಿಲಿನ ಅಬ್ಬರದೊಂದಿಗೆ ಉತ್ತಮ ಮಳೆಯಾಗಿದೆ. ಸುಳ್ಯ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಇತ್ತು ಸಂಜೆ 4 ಗಂಟೆಯ ಬಳಿಕ ಮಳೆ ಆರಂಭಗೊಂಡಿತ್ತು. ಸುಮಾರು ಒಂದು
ಗಂಟೆಗಗಳ ಮಳೆಯಾಗಿದ್ದು. ಬಳಿಕ
ವಿರಾಮ ನೀಡಿದ ಮಳೆ ರಾತ್ರಿಯ ವೇಳೆ ಮತ್ತೆ ಸುರಿದಿದೆ.ಗುಡುಗು ಸಿಡಿಲಿನ ಅಬ್ಬರದೊಂದಿಗೆ ಉತ್ತಮ ಮಳೆ ಸುರಿದಿದೆ.ಸುಳ್ಯ ತಾಲೂಕಿನ ಹಾಗು ಕಡಬ ತಾಲೂಕಿನ ವಿವಿಧ ಕಡೆಗಳಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಸುಬ್ರಹ್ಮಣ್ಯ ಮತ್ತಿತರ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯ ವಿಚಿಧ ಭಾಗಗಳಲ್ಲಿ ಮಧ್ಯಾಹನದಿಂದಲೇ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.
ಕರಾವಳಿ ಭಾಗದಲ್ಲಿ ಮೇ 20 ರಿಂದ ಮೇ 23 ರ ವರೆಗೆ ಭಾರಿ ಮಳೆಯಾಗಲಿದೆ. ಮೇ 21 ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮೇ 20 ಹಾಗೂ 23 ರಂದು ಆರೇಂಜ್ ಅಲರ್ಟ್ ಘೋಷಿಸಲಾಗಿದ್ದು, ಹೆಚ್ಚಿನ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.