ಚಿಕ್ಕಮಗಳೂರು: ಬಿಸಿಲ ಝಳಕ್ಕೆ ಕಂಗೆಟ್ಟಿದ್ದ ಮಲೆನಾಡಿಗರಿಗೆ ವರುಣದೇವ ತಂಪೆರೆದಿದ್ದಾನೆ. ಕರ್ನಾಟಕದ ಕೆಲವೆಡೆ ಭಾನುವಾರ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಚಿಕ್ಕಮಗಳೂರು ಮತ್ತು ಬೀದರ್ ಜಿಲ್ಲೆಯ ಕೆಲವೆಡೆ ಉತ್ತಮ ಮಳೆ ಸುರಿದಿದೆ.
ಚಿಕ್ಕಮಗಳೂರಿನ ವಿವಿಧ ಭಾಗಗಳಲ್ಲಿ
ಸಾಧಾರಣ ಮಳೆ ಸುರಿದಿದೆ. ಬೆಳಗ್ಗಿನಿಂದ ಮೋಡ ಕವಿದ ವಾತವರಣವಿತ್ತು. ಕೆಲವೆಡೆ ಉತ್ತಮ ಮಳೆಯಾದರೆ ಕೆಲವೆಡೆ ತುಂತುರು ಮಳೆಯಾಗಿದೆ.
ಮಧ್ಯಾಹ್ನದ ಬಳಿಕ ಮಳೆಯಾಗಿದೆ. ಕಳೆದ ಐದು ದಿನದ ಹಿಂದೆ ಚಿಕ್ಕಮಗಳೂರಿನಲ್ಲಿ ಮೊದಲ ಮಳೆಯಾಗಿತ್ತು. ಅದೇ ರೀತಿಯಾಗಿ ಬೀದರ್ ನಗರ ಸೇರಿದಂತೆ ಔರಾದ್ ತಾಲೂಕಿನ ಕೆಲವು ಕಡೆ ಉತ್ತಮ ಮಳೆ ಆಗಿದೆ. ಬಿಸಲಿನ ತಾಪದಿಂದ ಬಸವಳೆದಿದ್ದ ಜನತೆಗೆ ವರುಣನ ಸಿಂಚನವಾಗಿದೆ ಎಂದು ವರದಿಯಾಗಿದೆ. ಮಾ.20,22ರ ಬಳಿಕ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕೆಲವು ದಿನಗಳ ಹಿಂದೆ ಕೊಡಗು, ಚಿಕ್ಕಮಗಳೂರುಗಳಲ್ಲಿ ಮಳೆಯಾಗಿತ್ತು.














