ಅಜ್ಜಾವರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ,ಆರೋಗ್ಯ ಉಪಕೇಂದ್ರ,ಗ್ರಾಮ ಪಂಚಾಯತ್ ಅಜ್ಜಾವರ,ಶ್ರೀನಿಧಿ ಸ್ತ್ರೀ ಶಕ್ತಿ ಗೊಂಚಲು ಅಜ್ಜಾವರ, ಚೈತ್ರ ಯುವತಿ ಮಂಡಲ ಮಂಡಲ ಅಜ್ಜಾವರ ಮತ್ತು ಪ್ರತಾಪ ಯುವಕ ಮಂಡಲ ಅಜ್ಜಾವರ ,ವಿಷ್ಣು ಗೇಮ್ಸ್ ಕ್ಲಬ್ ಮೇನಾಲ ಇವರ ಸಹಯೋಗದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮೇನಾಲದ
ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನ ದಲ್ಲಿ ನಡೆಯಿತು.
ಸ್ತ್ರೀ ಶಕ್ತಿ ಗೊಂಚಲು ಸಮಿತಿ ಅಧ್ಯಕ್ಷೆ ವಿಶಾಲ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದ ಉದ್ಘಾಟನೆಯನ್ನು ಅಜ್ಜಾವರ ವಲಯ ಮೇಲ್ವಿಚಾರಕಿ ವಿಜಯ ನೆರವೇರಿಸಿ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ಮಾಲಿನಿ ಹಾಗೂ ಜಯಶ್ರೀ ಅವರು ಆರೋಗ್ಯ ಹಾಗೂ ಯೋಗ ಬಗ್ಗೆ ಮಾಹಿತಿ ನೀಡಿದರು.ಅಜ್ಜಾವರ ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಿ ಚ್ ಓ ಜಯಶ್ರೀ ಹಾಗೂ ಪ್ರತಾಪ ಯುವಕ ಮಂಡಲ ಅಜ್ಜಾವರ ಇದರ ಕೋಶಾಧಿಕಾರಿ ಲೋಕೇಶ್ ರಾವ್ ಉಪಸ್ಥಿತರಿದ್ದರು. ಗೊಂಚಲು ಸಮಿತಿ ಯ ಸದಸ್ಯೆಯರು ಮನೆಯಲ್ಲಿ ತಯಾರಿಸಿ ಮೂವತ್ತಕ್ಕೂ ಹೆಚ್ಚು ಬಗೆಯ ಪೌಷ್ಟಿಕ ಆಹಾರ ತಂದಿದ್ದರು. ಉತ್ತಮ ಆಹಾರ ತಯಾರಿಕೆಗೆ ಬಹುಮಾನ ಯುವತಿ ಮಂಡಲ ವತಿಯಿಂದ ವಿತರಿಸಲಾಯಿತು. ಹಾಗೆಯೇ ಪೋಷಣ್ ಪೌಡರ್ ಮೂರು ಮಕ್ಕಳಿಗೆ ಯುವಕ ಮಂಡಲ ವತಿಯಿಂದ ವಿತರಿಸಲಾಯಿತು.ಮಧ್ಯಾಹ್ನ ಲಘು ಉಪಹಾರದ ವ್ಯವಸ್ಥೆಯನ್ನು ವಿಷ್ಣು ಗೇಮ್ಸ್ ಕ್ಲಬ್ ಮೇನಾಲ ವಹಿಸಿದ್ದರು. ಈ ಸಂದರ್ಭದಲ್ಲಿ ಸೀಮಂತ ಕಾರ್ಯಕ್ರಮ ಹಾಗೂ ಮಗುವಿಗೆ ಅನ್ನಪ್ರಾಶನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿ ಗೊಂಚಲು ಪದಾಧಿಕಾರಿಗಳು,ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು,ಉಪಸ್ಥಿತರಿದ್ದರು. ದೊಡ್ಡೇರಿ ಗುಂಪಿನ ಸದಸ್ಯರು ಪ್ರಾರ್ಥನೆ ಹಾಡಿದರು, ಸ ರೇವತಿ ದೊಡ್ಡೇರಿ ಸ್ವಾಗತಿಸಿ, ದೇವಕಿ ಪಲ್ಲತಡ್ಕ ವಂದಿಸಿದರು. ಸಾವಿತ್ರಿ ಜಯನ್ ಕಾರ್ಯಕ್ರಮ ನಿರೂಪಿಸಿದರು.