ರೋಮ್: ರೋಮನ್ ಕ್ಯಾಥೋಲಿಕ್ ಚರ್ಚ್ನ ಮುಖ್ಯಸ್ಥ , ಕ್ರೈಸ್ತ ಧರ್ಮದ ಪರಮೋಚ್ಚ ನಾಯಕ ಪೋಪ್ ಫ್ರಾನ್ಸಿಸ್ ಅವರು ನಿಧನರಾಗಿದ್ದಾರೆ.ಅವರಿಗೆ 88 ವರ್ಷ ವಯಸ್ಸಾಗಿತ್ತು. ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ನ ಕಾಸಾ ಸಾಂತಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು
ವ್ಯಾಟಿಕನ್ ಪ್ರಕಟಿಸಿದೆ. ಪೋಪ್ ಫ್ರಾನ್ಸಿಸ್ ಅವರು ನಿಧನರಾಗಿರುವುದನ್ನು ಅತೀವ ದುಃಖದಿಂದ ಘೋಷಿಸುತ್ತಿದ್ದೇನೆ ಎಂದು ಕಾರ್ಡಿನಲ್ ಕೆವಿನ್ ಫಾರೆಲ್ ವ್ಯಾಟಿಕನ್ನ ಟಿವಿ ಚಾನೆಲ್ನಲ್ಲಿ ಘೋಷಿಸಿದ್ದಾರೆ.ಇಂದು ಬೆಳಿಗ್ಗೆ 7.35ಕ್ಕೆ, ಪೋಪ್ ಫ್ರಾನ್ಸಿಸ್ ಅವರು ನಿಧನರಾದರು. ಅವರ ಇಡೀ ಜೀವನವು ಭಗವಂತನ ಸೇವೆ ಮತ್ತು ಚರ್ಚ್ಗೆ ಸಮರ್ಪಿತವಾಗಿತ್ತು ಎಂದು ಫಾರೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಾರ್ಜ್ ಮಾರಿಯೊ ಬರ್ಗೊಗ್ಲಿಯೊ(ಪೋಪ್ ಫ್ರಾನ್ಸಿಸ್) 2013ರ ಮಾರ್ಚ್ 13ರಂದು ಪೋಪ್ ಆಗಿ ಆಯ್ಕೆಯಾಗಿದ್ದರು.