ನವದೆಹಲಿ:72 ನೇಯ ರಾಷ್ಟ್ರೀಯ ಪ್ರಶಸ್ತಿ ಪ್ರಕಟಗೊಂಡಿದೆ.ಈ ಸಲ ಅತ್ಯುತ್ತಮ ನಟ ಪ್ರಶಸ್ತಿ ಇಬ್ಬರಿಗೆ ಲಭಿಸಿದೆ. ಮಲೆಯಾಳಂ ನಟ ಮಮ್ಮುಟ್ಟಿ ‘ಭ್ರಮಯುಗಂ’ ಚಿತ್ರಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ. ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಚಂದು ಚಾಂಪಿಯನ್ ಚಿತ್ರಕ್ಕಾಗಿ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆರ್ಟಿಕ್-370 ಚಿತ್ರಕ್ಕಾಗಿ
ನಟಿ ಯಾಮಿ ಗೌತಮ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಕನ್ನಡದ ಮಿಥ್ಯ ಚಿತ್ರಕ್ಕೆ ಮೂರು ರಾಷ್ಟ್ರಪ್ರಶಸ್ತಿ ಸಂದಿದೆ. ಅತ್ಯುತ್ತಮ ಕನ್ನಡ ಸಿನಿಮಾ, ಅತ್ಯುತ್ತಮ ಬಾಲ ನಟ ಹಾಗೂ ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ ವಿಭಾಗದಲ್ಲಿ ಪ್ರಶಸ್ತಿ ಸಂದಿದೆ. ಅತ್ಯುತ್ತಮ ಬಾಲ ನಟ ವಿಭಾಗದಲ್ಲಿ ಆತೀಶ್ ಶೆಟ್ಟಿ ಹಾಗೂ ಅತ್ಯುತ್ತಮ ನಟಿ (ಪೋಷಕ ಪಾತ್ರ) ವಿಭಾಗದಲ್ಲಿ ರೂಪಶ್ರಿ ವರ್ಕಾಡಿ ಪ್ರಶಸ್ತಿ ಜಯಿಸಿದ್ದಾರೆ.
ಧನುಷ್ ಅವರು ಕ್ಯಾಪ್ಟನ್ ಮಿಲ್ಲರ್ ಮತ್ತು ರಾಯನ್ ಚಿತ್ರಗಳಿಗಾಗಿ ಎರಡು ಗೌರವಗಳನ್ನು ಪಡೆದಿದ್ದಾರೆ. ಕಲ್ಕಿ 2898 ಎಡಿ ಚಿತ್ರವು ಅತ್ಯಂತ ಜನಪ್ರಿಯ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರೆ, ಸ್ವಾತಂತ್ರ್ಯ ವೀರ್ ಸಾವರ್ಕರ್ ಚಿತ್ರಕ್ಕಾಗಿ ರಣದೀಪ್ ಹೂಡಾ ಅವರಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ ಒಲಿದಿದೆ.
ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಓಂ ರಾವತ್, ಅಸೀಮ್ ಬಜಾಜ್, ಪ್ರಿಯಾ ಕೆ, ರಾಕೇಶ್ ರಂಜನ್, ಮೀರಾ ಚೋಪ್ರಾ, ನೆಪೋಲಿಯನ್, ಶ್ರೀಲೇಖಾ ಮುಖರ್ಜಿ, ಅರ್ಚನಾ ಉಡುಪ ಮತ್ತು ವಿ.ಜಿ. ಕಲಾ ಇದ್ದರು. ಅಭಿನಯ, ನಿರ್ದೇಶನ, ಸಂಗೀತ, ಚಿತ್ರಕಥೆ ಹಾಗೂ ತಾಂತ್ರಿಕ ಶ್ರೇಷ್ಠತೆ ಸೇರಿದಂತೆ ವಿವಿಧ ವಿಭಾಗಗಳ ವಿಜೇತರನ್ನು ಘೋಷಿಸಲಾಗಿದೆ.








