ಸುಳ್ಯ:ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕದ ಇತಿಹಾಸ ಪ್ರಸಿದ್ಧ ಮುಹಿಯುದ್ದೀನ್ ಜುಮ್ಮಾ ಮಸೀದಿ ಪೇರಡ್ಕದ ವಲಿಯುಲ್ಲಾಹಿ ದರ್ಗಾ ಶರೀಫ್ನಲ್ಲಿ ಜ.31 ರಿಂದ ಫೆ.2ರ ವರೆಗೆ ಉರೂಸ್ ಸಮಾರಂಭ, 3 ದಿನಗಳ ಧಾರ್ಮಿಕ ಸಭೆ ಹಾಗೂ ಸರ್ವಧರ್ಮ ಸಮ್ಮೇಳನ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆಯಲಿದೆ ಎಂದು ಪೇರಡ್ಕ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಹಾಗೂ ಮುಹಿಯುದ್ದೀನ್ ರಿಫಾಯಿ ದಫ್ ಅಸೋಸಿಯೇಷನ್ನ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಜ.31 ರಂದು
ಪೇರಡ್ಕ ಎಂ.ಜೆ.ಎಂ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಧ್ವಜಾರೋಹಣ ನೆರವೇರಿಸುವವರು.ಎಂ ಜೆ ಎಂ ಪೇರಡ್ಕ ಇಲ್ಲಿನ ಖತೀಬರಾದ ಅಹಮ್ಮದ್ ನಈಮ್ ಫೈಝಿ ಅಲ್ ಮಅ್ಬರಿ ಪ್ರಾರ್ಥನೆ ನೆರವೇರಿಸುವರು. ಅಪರಾಹ್ನ.2ರಿಂದ ಮುಖಾಂ ಅಲಂಕಾರ ಮತ್ತು ಕೂಟು ಪ್ರಾರ್ಥನೆ ನಡೆಯಲಿದೆ. ರಾತ್ರಿ 8ರಿಂದ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಉದ್ಘಾಟನೆ ಹಾಗೂ ಖುತ್ಮುಲ್ ಖುರ್ಆನ್ ದುವಾ ನೇತೃತ್ವವನ್ನು ಹಮೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ನೆರವೇರಿಸುವರು. ಖ್ಯಾತ ವಾಗ್ಮಿ ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ ಧಾರ್ಮಿಕ ಪ್ರವಚನ ನೀಡುವರು. ಟಿ.ಎಂ.ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸುವರು.

ಎರಡನೇ ದಿನ ಫೆ.1ರಂದು ರಾತ್ರಿ ರೌಲತುಲ್ ಉಲೂಂ ದಫ್ ಕಳಿ ಸಂಘಂ ಪೂವಲ್ ಕಾಸರಗೋಡು ಇವರಿಂದ ದಫ್ ಸ್ಪರ್ಧೆ, ಬುರ್ದಾ ಮಜ್ಲಿಸ್, ರಸೂಲ್ ಮದ್ಹ್ ಗಾನಂ” ನಡೆಯುವುದು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್ ಉದ್ಘಾಟಿಸುವರು.ಎಂ ಜೆ ಎಂ ಪೇರಡ್ಕ ಖತೀಬರಾದ ಅಹಮ್ಮದ್ ನಈಮ್ ಫೈಝಿ ಅಲ್ ಮಅ್ಬರಿ ಧಾರ್ಮಿಕ ಪ್ರಭಾಷಣ ಮಾಡಲಿದ್ದಾರೆ.ಎಂ ಜೆ ಎಂ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹಿಂ ಮೈಲುಕಲ್ಲು ಅಧ್ಯಕ್ಷತೆ ವಹಿಸಲಿದ್ದಾರೆ.

ಮೂರನೇ ದಿನ ಫೆ.2ರಂದು ರಾತ್ರಿ ನಡೆಯುವ ಸರ್ವ ಧರ್ಮ ಸಮ್ಮೇಳನದ ಬಳಿಕ ಉರೂಸ್ ಸಮಾರೋಪ ಸಮಾರಂಭ ನಡೆಯಲಿದೆ. ಪೇರಡ್ಕ ಎಂ.ಜೆ.ಎಂ ಅಧ್ಯಕ್ಷ ಟಿ.ಎಂ.ಶಹೀದ್ ಅಧ್ಯಕ್ಷತೆ ವಹಿಸುವರು. ಎಂ ಜೆ ಎಂ ಪೇರಡ್ಕ ಇಲ್ಲಿನ ಖತೀಬರಾದ ಅಹಮ್ಮದ್ ನಈಮ್ ಫೈಝಿ ಅಲ್ ಮಅ್ಬರಿ ದುವಾ ನೇತೃತ್ವ ವಹಿಸುವರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಸರ್ವಧರ್ಮ ಸಮ್ಮೇಳನ ಉದ್ಘಾಟಿಸುವರು. ಸಾಮಾಜಿಕ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ದುಗಲಡ್ಕ ದುವಾಃ ನೆರವೇರಿಸುವರು. ಶಮೀರ್ ದಾರಿಮಿ ಕೊಲ್ಲಂ ಕಾರ್ಮಿಕ ಪ್ರಭಾಷಣ ಮಾಡುವರು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂಜೆಎಂ ಪೇರಡ್ಕದ ಉಪಾಧ್ಯಕ್ಷ ಟಿ.ಬಿ.ಹನೀಫ್, ಎಂಆರ್ಡಿಎ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್ ಉಪಸ್ಥಿತರಿದ್ದರು.