ಪಂಜ: ಪಂಜ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಇದರ ವತಿಯಿಂದ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ಪಂಜದಲ್ಲಿ ನಡೆದ ಸೂರ್ಯ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಮುಳುಗು ತಜ್ಞ, ಆಪತ್ಬಾಂದವ ಈಶ್ವರ್ ಮಲ್ಪೆ ಅವರನ್ನು ಸನ್ಮಾನಿಸಲಾಯಿತು.
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಲಗೋರಿ ಫೆಡರೇಷನ್ ಆಫ್ ಇಂಡಿಯಾ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಅವರು
ಸನ್ಮಾನ ನೆರವೇರಿಸಿದರು.ಪಂಚಶ್ರೀ ಪಂಜ ಸ್ಪೋರ್ಟ್ಸ್ ಅಧ್ಯಕ್ಷ ಹಿತೇಶ್ ಪಂಜದಬೈಲು, ನಿಕಟಪೂರ್ವಾದ್ಯಕ್ಫ ಪವನ್ ಪಲ್ಲತ್ತಡ್ಕ , ಕ್ಲಬ್ ನ ಸರ್ವ ಸದಸ್ಯರು, ಅತಿಥಿಗಳು ಉಪಸ್ಥಿತರಿದ್ದರು. ಕಬಡ್ಡಿ ಪಂದ್ಯಾಟದ ವೀಕ್ಷಕ ವಿವರಣೆ ನೀಡುತ್ತಿದ ವಿಜಯ್ ಅತ್ತಾಜೆ ಸ್ವಾಗತಿಸಿ, ವಂದಿಸಿದರು.

65 ಕೆ.ಜಿ ವಿಭಾಗದ ಸೂರ್ಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಪಂಚಶ್ರೀ ಟ್ರೋಫಿಯ ಸಮಾರೋಪ ಸಮಾರಂಭದಲ್ಲಿ
ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಿತೇಶ್ ಪಂಜದಬೈಲು ಸಭಾಧ್ಯಕ್ಷತೆ ವಹಿಸಿದ್ದರು. ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಬಹುಮಾನ ವಿತರಣೆ ಮಾಡಿದರು.ಮುಖ್ಯ ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಸದಸ್ಯೆ ವೀಣಾ,
ನಿವೃತ್ತ ಯೋಧ ಪದ್ಮನಾಭ ಬೊಳ್ಳಾಜೆ,
ಹಾಗೂ ಪ್ರಗತಿಪರ ಕೃಷಿಕ ಹುಕ್ರಪ್ಪ ಗೌಡ ಪಲ್ಲತ್ತಡ್ಕ, ಬೆಂಗಳೂರಿನ ಯುವ ಉದ್ಯಮಿ ಪ್ರಣಮ್ ರೈ ಅರ್ಗುಡಿ, ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ಲು,ಪಲ್ಲೋಡಿ ಉಳ್ಳಾಕುಲು ಕಲಾರಂಗದ ಅಧ್ಯಕ್ಷ ಬಾಲಕೃಷ್ಣ ಪಲ್ಲೋಡಿ, ಕುಸುಮಾಧರ ಕೋಟೆಗುಡ್ಡೆ, ರಾಷ್ಟ್ರೀಯ ಹಿರಿಯ ಕ್ರೀಡಾಪಟು ರವಿ ಚಳ್ಳಕೋಡಿ, ಕಾರ್ಯದರ್ಶಿ ತಾರಾನಾಥ (ಶಶಿ) ದಾಸ್, ಕಡಬ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಯಾಕಬ್ಬ್ , ಪೆರುವಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುನಿಲ್ ರೈ, ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಗೌರವ ಸಲಹೆಗಾರ ರತನ್ ಶೆಟ್ಟಿ ಕಬಡ್ಡಿ ಪಂದ್ಯಾಟ ಸಂಯೋಜಕರಾದ ಸತೀಶ್ ಕೆರೆಯಡ್ಕ , ವರ್ಷಿತ್ ಪಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪವನ್ ಪಲ್ಲತ್ತಡ್ಕ ಸ್ವಾಗತಿಸಿದರು. ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು. ಬಿಪಿನ್ ಸಂಕಡ್ಕ ವಿಜೇತರ ಪಟ್ಟಿಯಾಚಿಸಿದರು.ಶರತ್ ಕುದ್ವ ವಂದಿಸಿದರು.
ಫಲಿತಾಂಶ: ಒಟ್ಟು 24 ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿತ್ತು.ಶ್ರೀನಿಧಿ ಪುತ್ಯ (ಪ್ರಥಮ), ಯುವಶಕ್ತಿ ಗೆಳೆಯರ ಬಳಗ ಪೊಳೆಂಜ(ದ್ವಿತೀಯ), ಪಾಂಚಜನ್ಯ ಕೋಡಿಂಬಾಳ (ತೃತೀಯ), ಆದರ್ಶ ಹೊಸಮಠ ಎ (ಚತುರ್ಥ),ಆದರ್ಶ ಹೊಸಮಠ ಬಿ (ಪಂಚಮ), ಕಾವೇರಿ ಮಾತಾ ಕೊಡಗು (ಷಷ್ಠ), ಬಿ.ಕೆ ಬಾಯ್ಸ್ ಬಂಗಾರಕೋಡಿ (ಸಪ್ತಮ), ಸೆವೆನ್ ಸ್ಟಾರ್ ಕಲ್ಪನೆ (ಅಷ್ಠಮ) ಸ್ಥಾನ ಪಡೆದಿದೆ. ಶಿಸ್ತು ಬದ್ಧ ತಂಡ ಆದರ್ಶ ಹೊಸಮಠ ಬಿ, ಬೆಸ್ಟ್ ರೈಡರ್ ಶ್ರೀನಿಧಿ ತಂಡದ ದೇವ್, ಬೆಸ್ಟ್ ಕ್ಯಾಚರ್ ಪೊಳೆಂಜ ತಂಡದ ಆದರ್ಶ್ , ಎಮರ್ಜಿಂಗ್ ಪ್ಲೇಯರ್ ಆದರ್ಶ ಹೊಸಮಠ ತಂಡದ ಕಿಶನ್ , ಬೆಸ್ಟ್ ಆಲ್ ರೌಂಡರ್ ಶ್ರೀನಿಧಿ ತಂಡದ ಗಂಗಾರಾಮ್, ಗೇಮ್ ಚೇಂಜರ್ ಪೊಳೆಂಜ ತಂಡದ ಅಜಯ್ ವೈಯಕ್ತಿಕ ಬಹುಮಾನ ಪಡೆದಿದ್ದಾರೆ.