ಪಂಬೆತಾಡಿ:ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಕ್ಕೆ ಜ. 13ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ನಾಗರಿಕ ಸಮಿತಿ 8 ಸ್ಥಾನಗಳಲ್ಲಿ ಜಯಗಳಿಸಿದರೆ, ಬಿಜೆಪಿ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು 4 ಸ್ಥಾನಗಳಲ್ಲಿ ಜಯ ಗಳಿಸಿತು. ಮಹೇಶ್ ಕುಮಾರ್ ಕರಿಕ್ಕಳ ನೇತೃತ್ವದಲ್ಲಿ ಸ್ಪರ್ಧಿಸಿದ
ನಾಗರಿಕ ಸಮಿತಿಯ ಅಭ್ಯರ್ಥಿಗಳು ಸಾಮಾನ್ಯ ಕ್ಷೇತ್ರದಿಂದ ಮಹೇಶ್ ಕುಮಾರ್ ಕರಿಕ್ಕಳ, ಗಣೇಶ್ ಪ್ರಸಾದ್ ಭೀಮಗುಳಿ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ವೆಂಕಪ್ಪ ಎನ್ ಪಿ ಬೆಳಗಜೆ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಲವಕುಮಾರ್, ಪರಿಶಿಷ್ಟ ಪಂಗಡ ಮೀಸಲು ಸ್ಥಾನ ಧರ್ಮಣ ನಾಯ್ಕ ಗರಡಿ, ಪರಿಶಿಷ್ಟ ಜಾತಿ ಮೀಸಲು ಸ್ಥಾನ ಗುರುವ ಕಲ್ಚಾರ್, ಮಹಿಳಾ ಮೀಸಲು ಸ್ಥಾನದಿಂದ ರಂಜಿನಿ ಪಂಜಬೀಡು ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ಧನಂಜಯ ಮಡಪ್ಪಾಡಿ ವಿಜಯಿಯಾದರು. ಬಿಜೆಪಿ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಜೆಡಿಎಸ್ ನಾಯಕ ಸಂಘದ ಹಾಲಿ ಅಧ್ಯಕ್ಷ ಜಾಕೆ ಮಾಧವ ಗೌಡ, ಮಾಜಿ ಉಪಾಧ್ಯಕ್ಷ ಸಂತೋಷ್ ಜಾಕೆ, ದಿಲೀಪ್ ಬಾಬ್ಲುಬೆಟ್ಟು, ಮಹಿಳಾ ಮೀಸಲು ಸ್ಥಾನದಿಂದ ಮೂಕಾಂಬಿಕಾ ಜಯಗಳಿಸಿದ್ದಾರೆ.