ಸಂಪಾಜೆ: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಡೆ ಅಪಘಾತ ಸಂಭವಿಸಿದೆ. ಸಂಪಾಜೆಯಲ್ಲಿ ಹಾಗೂ ಕೊಯನಾಡಿನಲ್ಲಿ ವಾಹನ ಅಪಘಾತ ಸಂಭವಿಸಿದೆ. ಸಂಪಾಜೆ ಪೆಟ್ರೋಲ್ ಬಂಕ್ ಬಳಿ ಕಾರುಗಳ ಮಧ್ಯೆ ಅಪಘಾತ ಸಂಭವಿಸಿದರೆ ಕೊಯನಾಡು ಬಳಿ ಕೆಎಸ್ಆರ್ಟಿಸಿ ಬಸ್ ಹಾಗೂ ಕಾರು ಮಧ್ಯೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಎರಡೂ ಅಪಘಾತದಲ್ಲಿ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ವಾಹನಗಳು ಜಖಂಗೊಂಡಿದೆ.