ಮುರುಳ್ಯ:ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ವಸಂತ ನಡುಬೈಲು ಹಾಗೂ ಉಪಾಧ್ಯಕ್ಷರಾಗಿ ನಾಗೇಶ್ ಆಳ್ವ ಆಯ್ಕೆಯಾಗಿದ್ದಾರೆ. ಅಧ್ಯಕ್ಷತೆಗೆ ವಸಂತ ನಡುಬೈಲು, ಅನೂಪ್ ಬಿಳಿಮಲೆ ಹಾಗೂ ಉಪಾಧ್ಯಕ್ಷತೆಗೆ ರಾಜೇಂದ್ರ ಪ್ರಸಾದ್ ಹಾಗೂ ನಾಗೇಶ್ ಆಳ್ವ ನಾಮಪತ್ರ ಸಲ್ಲಿಸಿದ್ದರು. ಸಹಕಾರ ಸಂಘದ 12 ನಿರ್ದೇಶಕರು ಹಾಗೂ
ಒಬ್ಬರು ಡಿಸಿಸಿ ಬ್ಯಾಂಕ್ ಪ್ರತಿನಿಧಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಮತ ಎಣಿಕೆ ನಡೆದಾಗ 9 ಮತ ಪಡೆದು ವಸಂತ ನಡುಬೈಲು ಅಧ್ಯಕ್ಷರಾದರೆ, 8 ಮತ ಪಡೆದ ನಾಗೇಶ್ ಆಳ್ವ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಅನೂಪ್ ಬಿಳಿಮಲೆ 4 ಮತ, ರಾಜೇಂದ್ರ ಪ್ರಸಾದ್ 5 ಮತ ಪಡೆದರು. ಪರಾಭವಗೊಂಡರು. ಮುರುಳ್ಯ ಎಣ್ಮೂರು ಸಹಕಾರ ಸಂಘದ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳಲ್ಲಿಯೂ ಬಿಜೆಪಿ ಬೆಂಬಲಿತರು ಜಯ ಗಳಿಸಿದ್ದರು. ಇದೀಗ ಬಿಜೆಪಿ ಸದಸ್ಯರ ಮಧ್ಯೆಯೇ ಚುನಾವಣೆ ನಡೆದು ಕುತೂಹಲ ಕೆರಳಿಸಿತು.