ಮಂಗಳೂರು: ಎ.15ರಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ 9ಕ್ಕೆ ಕಡಬ ತಾಲೂಕು ಅಲಂತಾಯ ಶಾಲಾ ಭೇಟಿ
10ಕ್ಕೆ ನೆಲ್ಯಾಡಿ ಗ್ರಾ ಪಂ ಕಟ್ಟಡ ಉದ್ಘಾಟನೆ ,11.30 ಕ್ಕೆ ಕಡಬ ತಾಲೂಕು
ಕಚೇರಿಯಲ್ಲಿ ಜಂಟಿ ಸರ್ವೇ ಬಗ್ಗೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಭೆಯಲ್ಲಿ ಭಾಗಿ. 1.30- ಕಡಬ ತಾಲೂಕು ಎಡಮಂಗಲದಲ್ಲಿ ಕಾರ್ಯಕರ್ತರ ಸಭೆ ಮತ್ತು ಬಳಿಕ ಹಿರಿಯ ಕಾರ್ಯಕರ್ತರ ಮನೆ ಭೇಟಿ, 2.30 ಸುಳ್ಯ ತಾಲೂಕು ನಿಂತಿಕಲ್ಲಿನಲ್ಲಿ ಸಿಆರ್ಎಫ್ ನಿಧಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ. 3.00 ಪಂಜದಲ್ಲಿ ಕಾರ್ಯಕರ್ತರ ಭೇಟಿ.4.30 – ಕಡಬ ತಾಲೂಕು ಬಿಳಿನೆಲೆ ಗ್ರಾಮದ ಕೈಕಂಬ ದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗಿ.
ಸಂಸದರ ಜೊತೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ