ಅರಂತೋಡು: ಅಗ್ನಿ ದುರಂತ ಸಂಭವಿಸಿ ಹೊತ್ತಿ ಉರಿದು ಹಾನಿ ಸಂಭವಿಸಿದ ಅರಂತೋಡು ಗ್ರಾಮ ಪಂಚಾಯತ್ ಘನ ತ್ಯಾಜ್ಯ ಘಟಕಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಜಿಲ್ಲಾ ಪಂಚಾಯತ್ ನೂತನ ಸಿಇಒ
ನರ್ವಡೆ ವಿನಾಯಕ್ ಕಾರ್ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟಕ ವೀಕ್ಷಿಸಿದ ಶಾಸಕರು ಹಾಗೂ

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಮಾಹಿತಿ ಪಡೆದರು. ಗ್ರಾಮ ಪಂಚಾಯತ್ನಲ್ಲಿ ಸಭೆ ನಡೆಸಿ ಚರ್ಚೆ ನಡೆಸಿದರು. ತಾ.ಪಂ ಇ. ಓ. ರಾಜಣ್ಣ, ಇಂಜಿನಿಯರ್ಗಳಾದ ಫಯಾಜ್, ಚೈತ್ರ, ಮಣಿಕಂಠ, ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಉಪಾಧ್ಯಕ್ಷೆ ಭವಾನಿ, ಆರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಸತೀಶ್ ನಾಯ್ಕ್, ಪಂಚಾಯತ್ ಸದಸ್ಯರಾದ ವೆಂಕಟರಮಣ ಪೆತ್ತಾಜೆ, ಸ್ಥಳೀಯ ಮುಖಂಡರಾದ ಸೋಮಶೇಖರ್ ಪೈಕ, ಭಾರತಿ ಪುರುಷೋತ್ತಮ ಉಳುವಾರು, ಸ್ವಚ್ಛತಾ ಘಟಕದ ಸಿಬ್ಬಂದಿಗಳು, ಮತ್ತು ಪಂಚಾಯತ್ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.














