ಮಡಪ್ಪಾಡಿ: ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ವಿನಯ ಕುಮಾರ್ ಮುಳುಗಾಡು ಮತ್ತು ಉಪಾಧ್ಯಕ್ಷರಾಗಿ ಸಚಿನ್ ಬಳ್ಳಡ್ಕ ಆಯ್ಕೆಯಾದರು.ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ವಿನಯ ಕುಮಾರ್ ಮುಳುಗಾಡು ನಾಮಪತ್ರ ಸಲ್ಲಿಸಿದ್ದರು.ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಿತ್ರದೇವ ಮಡಪ್ಪಾಡಿ ನಾಮಪತ್ರ ಸಲ್ಲಿಸಿದ್ದರು.ಉಪಾಧ್ಯಕ್ಷ ಸ್ಥಾನಕ್ಕೆ
ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿಯಾಗಿ ಸಚಿನ್ ಬಳ್ಳಡ್ಕ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸೋಮಶೇಖರ ಕೇವಳ ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ನಡೆದು ಅಧ್ಯಕ್ಷರಾಗಿ ವಿನಯ ಕುಮಾರ್ ಮುಳುಗಾಡು ಮತ್ತು ಉಪಾಧ್ಯಕ್ಷರಾಗಿ ಸಚಿನ್ ಬಳ್ಳಡ್ಕ ಆಯ್ಕೆಯಾದರು.
ನಿರ್ದೇಶಕರುಗಳಾದ ಜಯರಾಮ ಪಿ.ಸಿ., ಚಂದ್ರಶೇಖರ ಗುಡ್ಡೆ, ಕರುಣಾಕರ ಪಾರೆಪ್ಪಾಡಿ, ಪ್ರದೀಪ್ಕುಮಾರ್ ಪಿ.ಬಿ., ಆನಂದ ಎಸ್., ಪ್ರವೀಣ ಯತೀಂದ್ರನಾಥ ಪಾಲ್ತಾಡು, ಶಕುಂತಲಾ ಕೇವಳ, ಶಿವರಾಮ ಚಿರೆಕಲ್ಲು, ಡಿ.ಸಿ.ಸಿ. ಬ್ಯಾಂಕ್ ಜಿಲ್ಲಾ ಪ್ರತಿನಿಧಿ ಮನೋಜ್ ಕುಮಾರ್ ಉಪಸ್ಥಿತರಿದ್ದರು. ಬಿ.ನಾಗೇಂದ್ರ ಚುನಾವಣಾಧಿಕಾರಿಯಾಗಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ಮತ್ತು ಸಿಬ್ಬಂದಿಗಳು ಸಹಕರಿಸಿದರು .