ಮಂಗಳೂರು: ದ.ಕ.ಮತ್ತು ಉಡುಪಿ ಜಿಲ್ಲೆಗಳ ಭೂ ಸಮಸ್ಯೆ ಬಗೆಹರಿಸಲು ನಗರಾಭಿವೃದ್ಧಿ ಸಚಿವರಿಗೆ ಮತ್ತು ಸರ್ಕಾರದ ಕಾರ್ಯದರ್ಶಿಗೆ ಸ್ಪೀಕರ್ ಪತ್ರ ಬರೆದಿದಿದ್ದಾರೆ.ಸ್ಪೀಕರ್ ಯು. ಟಿ. ಖಾದರ್ ರವರನ್ನು ಭೇಟಿ ಮಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಒಕ್ಕೂಟದ ಅಧ್ಯಕ್ಷ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ
ಅಧ್ಯಕ್ಷ ಸದಾಶಿವ ಉಳ್ಳಾಲ್ ಹಾಗೂ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಪ್ರತ್ಯೇಕ ವಲಯ ನಿಯಮಾವಳಿ ರಚಿಸಲು ಮತ್ತು ಇತ್ತೀಚೆಗೆ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಜಾರಿ ಗೊಳಿಸಿದ 9/11, ವಿನ್ಯಾಸ ನಕ್ಷೆ, ಪರವಾನಿಗೆ ಮೊದಲಾದ ನಿಯಮಗಳಲ್ಲಿ ಸರಳೀಕರಣ ಗೊಳಿಸುವಂತೆ ಸಂಬಂಧಪಟ್ಟವರಿಗೆ ಶಿಫಾರಸ್ಸು ಮಾಡುವಂತೆ ವಿನಂತಿಸಲಾಯಿತು, ಕೂಡಲೇ ಸ್ಪಂದಿಸಿದ ಸ್ಪೀಕರ್ ರವರು ನಗರಾಭಿವೃದ್ಧಿ ಸಚಿವರಿಗೆ ಮತ್ತು ನಗರಾಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಯವರಿಗೆ ಪತ್ರ ಬರೆದಿರುತ್ತಾರೆ ಎಂದು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಸದಾಶಿವ ಉಳ್ಳಾಲ್ ಮತ್ತು ಮುಸ್ತಫ ಸುಳ್ಯ ತಿಳಿಸಿರುತ್ತಾರೆ