ಸುಳ್ಯ:ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಯೂನಿಯನ್ ಸಾರ್ವಜನಿಕ ಸೇವಾ ಆಯೋಗ ಎಂಬ ಕಾರ್ಯಗಾರವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ. ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಗುರಿ ಅಗತ್ಯ. ಗುರಿಯನ್ನು ತಲುಪಿಸುವ
ಪ್ರಯತ್ನ ನಮ್ಮದು. ನೀವು ಗುರಿ ಇಟ್ಟು ಕೆಲಸ ಮಾಡಿದರೆ ಜೀವನದಲ್ಲಿ ಯಶಸ್ಸನ್ನು ಕಾಣುವಿರಿ. ಸಿಕ್ಕಿರುವ ಅವಕಾಶವನ್ನು ಬಳಸಿಕೊಳ್ಳಿ ಎಂದು ಹೇಳಿದರು.ಮುಖ್ಯ ತರಬೇತುದಾರರಾಗಿ ಮಂಗಳೂರಿನ ಸರ್ವಜ್ಞ ಐ ಎ ಎಸ್ ಅಕಾಡೆಮಿಯ ನಿರ್ದೇಶಕ ಸುರೇಶ್ ಎಂ ಎಸ್ ಆಗಮಿಸಿ ತರಬೇತಿ ನೀಡಿದರು.ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್,ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ,ಶಾಲಾ ಆಡಳಿತಾತ್ಮಕ ಸಂಯೋಜನಾಧಿಕಾರಿ ರೇಣುಕಾ ಉತ್ತಪ್ಪ ಉಪಸ್ಥಿತರಿದ್ದರು. ಅಲಿಸ್ಬ ಸಾರ ಕಾರ್ಯಕ್ರಮ ನಿರೂಪಿಸಿದರು ಕೃತಾರ್ಥ ಪಿ ಡಿ ಸ್ವಾಗತಿಸಿ ಸಾನ್ವಿ ವಂದಿಸಿದಳು.