ಸುಳ್ಯ:ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ‘ ಶಾಲಾ ಸಂಸತ್ನ ಪದಗ್ರಹಣ ಸಮಾರಂಭ ಕೆವಿಜಿ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ.ವಿ ಶುಭ ಹಾರೈಸಿದರು. ಮುಖ್ಯ ಅತಿಥಿ ಸುಳ್ಯದ ಎಎಸ್ಐ ತಾರಾನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಶಾಲಾ
ಪ್ರಾಂಶುಪಾಲ ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಎಒಎಲ್ಇ ಕಮಿಟಿ ಬಿ ಆಡಳಿತಾಧಿಕಾರಿ ಭವಾನಿ ಶಂಕರ ಅಡ್ತಲೆ, ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಆಡಳಿತ ಮಂಡಳಿಯ ಸದಸ್ಯರಾಗಿರುವ ಬಾಲಗೋಪಾಲ ಸೇರ್ಕಜೆ, ಸಂತೋಷ್ ಕುತ್ತಮುಟ್ಟೆ ಶಾಲಾ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಉಪಸ್ಥಿತರಿದ್ದರು. ಅರಂಭದಲ್ಲಿ ವಿದ್ಯಾರ್ಥಿ ನಾಯಕರ ಪಥಸಂಚಲನ ನಡೆಯಿತು. ಶಾಲಾ

ನಾಯಕ ಶ್ರೀಹರಿ.ಎಸ್ , ಉಪನಾಯಕ ಮೋಹಕ್ ಕೆ , ಶಾಲಾ ನಾಯಕಿ ಸ್ಕಂದ ದಿಯ ಕಲ್ಲಾಜೆ , ಉಪನಾಯಕಿ ಪ್ರತಿಕ್ಷ , ಸಾಂಸ್ಕೃತಿಕ ಮಂತ್ರಿ ಸೋನಾ ನಾರ್ಕೂಡು, ಉಪ ಸಾಂಸ್ಕೃತಿಕ ಮಂತ್ರಿ ನಿಧಿ ಪಿ. ಎಚ್, ಶಿಕ್ಷಣ ಮಂತ್ರಿ ಮನ್ವಿತಾ ಸಿ ಎಚ್ , ಉಪ ಶಿಕ್ಷಣ ಮಂತ್ರಿ ನಿಯಾ ಶೆಟ್ಟಿ , ಶಿಸ್ತಿನ ಮಂತ್ರಿ ಅಲಿಸ್ಬ ಸಾರ , ಉಪಶಿಸ್ತಿನ ಮಂತ್ರಿ ಮಾನ್ವಿ ಎ ವೈ, ಆರೋಗ್ಯ ಮತ್ತು ನೈರ್ಮಲ್ಯ ಮಂತ್ರಿ ಆಯಿಷತ್ ಉಮ್ಮಲ್ ಫಿದಾ, ಉಪ ಆರೋಗ್ಯ ಮತ್ತು ನೈರ್ಮಲ್ಯ ಮಂತ್ರಿ ಕ್ಷಿತಿ ಎನ್ ಮುರೂರ್ , ಕ್ರೀಡಾ ಮಂತ್ರಿ ಆಯಿಷಾ ನಶ್ವ , ಉಪ ಕ್ರೀಡಾ ಮಂತ್ರಿ ವೀಕ್ಷಿತ್ ಎ ಎಸ್ , ಶಾಲಾ ಕ್ಯಾಬಿನೆಟ್ ನಾಯಕರು ಮತ್ತು ಶಾಲೆಯ ನಾಲ್ಕು ತಂಡದ ನಾಯಕರುಗಳಿಗೆ ಅತಿಥಿಗಳಿಗಳು ಪದವಿ ಪದಕ ನೀಡಿದರು. ಹತ್ತನೇ ತರಗತಿಯ ಶ್ರದ್ಧಾ ಪೈ ಮತ್ತು ಸೀಮಾ ಆಯಿಷಾ ನಿರೂಪಿಸಿದರು. ಶಮ್ಯ ಸ್ವಾಗತಿಸಿ, ಮೋಹಕ್ ವಂದಿಸಿದನು. ಅತಿಥಿಗಳ ಪರಿಚಯವನ್ನು ಸ್ಪಂದನ ವಾಚಿಸಿದರು. ಕೆವಿಜಿ ಅಮರಜ್ಯೋತಿ ಕಾಲೇಜಿನ
ಪ್ರಾಂಶುಪಾಲೆ ಡಾ.ಯಶೋಧ ರಾಮಚಂದ್ರ, ಕೆ ವಿ ಜಿ ಐಟಿಐ ಕಾಲೇಜಿನ ಪ್ರಾಂಶುಪಾಲ ದಿನೇಶ್ ಮಡ್ತಿಲ, ಕೆವಿಜಿ ಡೆಂಟಲ್ ಕಾಲೇಜಿನ ಆಡಳಿತಾಧಿಕಾರಿ ಮಾಧವ ಬಿ. ಟಿ, ಕೆವಿಜಿ ಆಡಳಿತ ಮಂಡಳಿಯ ಪ್ರಸನ್ನ ಕಲ್ಲಾಜೆ, ಪದ್ಮನಾಭ, ದಯಾನಂದ ಅಟ್ಲೂರು, ವಸಂತ ಮತ್ತು ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.