ಸುಳ್ಯ:ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ಇದರ 34ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವು ಕೆ.ವಿ.ಜಿ ಕಮ್ಯುನಿಟಿ ಹಾಲ್ನಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಮೋಕ್ಷ ನಾಯಕ್ ಸ್ಬಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ನವದೆಹಲಿ ಇದರ
ಗೌರವಾನ್ವಿತ ಸದಸ್ಯರಾದ ಡಾ. ಶಿವಶರಣ್ ಶೆಟ್ಟಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ ವಿದ್ಯಾರ್ಥಿಗಳ ವೈದ್ಯಕೀಯ ಸೇವೆ ಪ್ರತಿ ಭಾಗದ ಜನರಿಗೆ ಸಿಗುವಂತಾಗಲಿ ಎಂದು ಶುಭ ಹಾರೈಸಿದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು ಜೆ ಮಾತನಾಡಿದರು. ಕಾಲೇಜಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮೌರ್ಯ ಆರ್ ಪ್ರಸಾದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಡಾ. ಶಿವಶರಣ್ ಶೆಟ್ಟಿಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು ಇವರ ಪರಿಚಯವನ್ನು ಡಾ. ದಯಾಕರ್ ಎಂ ಎಂ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸುಳ್ಯ ಸಬ್ ಇನ್ಸ್ಪೆಕ್ಟರ್ ಸಂತೋಷ್ ಹಾಗೂ ಕಾನೂನು ಸಲಹೆಗಾರರಾದ ದೀಪಕ್ ಕುತ್ತಮೊಟ್ಟೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಿದ ಕಾಲೇಜಿನ ಅನಾಟಮಿ ವಿಭಾಗವನ್ನು ಡಾ. ಶಿವಶರಣ್ ಶೆಟ್ಟಿ ಹಾಗೂ ಡಿಸೆಕ್ಷನ್ ವಿಭಾಗವನ್ನು ಮೌರ್ಯ ಆರ್ ಪ್ರಸಾದ್ ಅವರು ಉದ್ಘಾಟಿಸಿದರು. ಪ್ರಾರ್ಥನೆಯನ್ನು ಡಾ. ಭೂಮಿಕಾ ಆರ್ ಶೆಟ್ಟಿ ನೆರವೇರಿಸಿದರು ಹಾಗೂ ಕೊನೆಯಲ್ಲಿ ಉಪ ಪ್ರಾಂಶುಪಾಲೆ ಡಾ. ಶೈಲಾ ಪೈ ವಂದಣಾರ್ಪಣೆಗೈದರು.
ಕಾರ್ಯಕ್ರವನ್ನು ಅನ್ಸಿಲಾ ರಾಗೇಶ್, ಕಾರ್ಲಿನ್ ರೆನಿ ಕಾರ್ಡೋಜಾ ನಿರೂಪಿಸಿದರು. ಈ ಕಾರ್ಯಕ್ರಮವನ್ನು ಮಾಧವ ಬಿ ಟಿ ನಿರ್ವಹಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಭೋಧಕ ಭೋಧಕೇತರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಎಲ್ಲಾ ನೂತನ ವಿಧ್ಯಾರ್ಥಿಗಳಿಗೆ ಹೂಗುಚ್ಚ ಹಾಗೂ ವೈದ್ಯಕೀಯ ಸಮವಸ್ತ್ರ ನೀಡಿ ಸ್ವಾಗತಿಸಲಾಯಿತು.